ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಚಂಡಮಾರುತ: ಮಹಾರಾಷ್ಟ್ರದಲ್ಲಿ 4 ಸಾವು

Last Updated 4 ಜೂನ್ 2020, 4:49 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯ ಅಲೀಭಾಗ್‌ಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತಕ್ಕೆನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಅಲೀಭಾಗ್‌ನಲ್ಲಿ ಅಬ್ಬರಿಸಿದ್ದ ಚಂಡಮಾರುತವು ಗುರುವಾರ ಬೆಳಗ್ಗೆ ನಾಸಿಕ್ ಮತ್ತು ಮಹಾರಾಷ್ಟ್ರದ ಉತ್ತರ ಭಾಗಕ್ಕೆ ಪ್ರವೇಶಿಸಿದೆ.

ರಾಯ್‌ಗಡದ ಶ್ರೀವರ್ಧನ್‌ನಲ್ಲಿ ಮರ ಉರುಳಿ ಬಿದ್ದು 16 ವರ್ಷದ ಬಾಲಕ ಮೃತಪಟ್ಟಿದ್ದಾನೆ . ಅದೇವೇಳೆ ಅಲೀಭಾಗ್‌ಗಲ್ಲಿ ವಿದ್ಯುತ್ ಕಂಬ ಬಿದ್ದು 52ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

ಪುಣೆಯಲ್ಲಿ ಮನೆ ಕುಸಿದು ಬಿದ್ದು 65ರ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ಹವೇಲಿಯಲ್ಲಿ ಮನೆಯ ಚಾವಣಿ ಹಾರಿ ಹೋಗಿ 52ರ ಹರೆಯದ ವ್ಯಕ್ತಿ ಮೃತಪಟ್ಟಿದ್ದಾರೆ.

ಮುಂಬೈ, ದಕ್ಷಿಣ ಕೊಂಕಣ್, ಅವಳಿ ಜಿಲ್ಲೆಗಳಾದ ರತ್ನಗಿರಿ ಮತ್ತು ಸಿಂಧುದುರ್ಗ, ಥಾಣೆಯ ಉತ್ತರ ಕೊಂಕಣ ಪ್ರದೇಶ ಮತ್ತು ಪಾಲ್ಘರ್‌ನಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.ಉತ್ತರ ಕೊಂಕಣದಲ್ಲಿರುವ ರಾಯ್‌ಗಡಕ್ಕೆ ಅಪ್ಪಳಿಸಿದ ಚಂಡಮಾರುತ ಪುಣೆಯನ್ನು ಹಾದು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT