ಶನಿವಾರ, ಸೆಪ್ಟೆಂಬರ್ 19, 2020
21 °C

ಮುಂಬೈನಿಂದ ಹೊರಹಾಕಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆ: ಡಿಕೆಶಿ ಅಸಮಾಧಾನ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಆದರೆ ನನ್ನನ್ನು ಮುಂಬೈನಿಂದ ಹೊರ ಹಾಕಲಾಗಿದೆ. ಏರ್‌ಪೋರ್ಟ್‌ಗೆ ಬಿಟ್ಟು ಬರಬೇಕು ಎಂದು ಪೊಲೀಸರಿಗೆ ಆದೇಶವಾಗಿದೆಯಂತೆ. ಮುಂಬೈ ಹಿಂದಿನಿಂದಲೂ ಒಂದೊಳ್ಳೆ ಸಂಸ್ಕೃತಿಯಲ್ಲಿ ನಡೆದುಕೊಂಡ ಬಂದ ನಗರ. ಆದರೆ, ಈಗ ನನ್ನನ್ನು ಹೊರ ಹಾಕಲಾಗುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ತೋಡಿಕೊಂಡರು.

ನಾನು ಶಾಸಕರನ್ನು ನೋಡಲೇಬೇಕು ಮಾತನಾಡಲೇಬೇಕು. ಹೋಟೆಲ್‌ ಪ್ರವೇಶಿಸಲು, ನನ್ನ ಸ್ನೇಹಿತರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದು ನಾನು ನಡೆಸಿದ ಹೋರಾಟದಲ್ಲಿ ಮುಂಬೈನ ಪಕ್ಷದ ನನ್ನ ಸ್ನೇಹಿತರು ನನ್ನ ಜತೆಗಿದ್ದರು. ಅವರಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದರು.  

ಹೋಟೆಲ್‌ ಪ್ರವೇಶ ಮಾಡಲು ನನಗೆ ಅವಕಾಶ ನೀಡಲಿಲ್ಲ. ಪೊಲೀಸರು ನನ್ನನ್ನು ಬಲವಂತದಿಂದ ಕರೆದೊಯ್ದರು. ರಾಜೀನಾಮೆ ನೀಡಿರುವ ಎಲ್ಲ ಶಾಸಕರೂ ಮರಳಿ ಬರುತ್ತಾರೆ ಎಂಬ ವಿಶ್ವಾಸ ನನಗೆ ಈಗಲೂ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ನಮ್ಮ ಸರ್ಕಾರ ಸುರಕ್ಷಿತವಾಗಿದೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.