ಶನಿವಾರ, ನವೆಂಬರ್ 23, 2019
17 °C

ಕಣ್ಣೀರು ಹಾಕಿದ ಡಿ.ಕೆ. ಸುರೇಶ್

Published:
Updated:

ನವದೆಹಲಿ: ಡಿ.ಕೆ. ಶಿವಕುಮಾರ್‌ ಅವರನ್ನು ಇ.ಡಿ ವಶಕ್ಕೆ ನೀಡಲು ಕೋರ್ಟ್ ಅನುಮತಿ ನೀಡಿದ ಬಳಿಕ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಅವರು ಕಣ್ಣೀರು ಹಾಕಿದರು. 

ವಕೀಲರು, ಪತ್ರಕರ್ತರಿಂದ ತುಂಬಿದ್ದ ಕೋರ್ಟ್ ಹಾಲ್‌ನಲ್ಲಿ ಆದೇಶ ಪ್ರಕಟವಾಗುತ್ತಿದ್ದಂತೆಯೇ ಅವರು ಚಿಂತಾಕ್ರಾಂತರಾದರು. ಕೋರ್ಟ್ ಆವರಣದಲ್ಲಿ ಸಹೋದರ ಶಿವಕುಮಾರ್ ಜತೆ ಮಾತನಾಡುತ್ತಾ ಕಣ್ಣೀರಿಕ್ಕಿದರು. ಇವರ ಜೊತೆಗಿದ್ದ ಶಾಸಕರಾದ ಡಾ. ರಂಗನಾಥ್, ಲಕ್ಷ್ಮೀ ಹೆಬ್ಬಾಳಕರ ಅವರೂ ಭಾವುಕರಾದರು.

ಕೆಲವು ದಿನಗಳಿಂದ ಡಿಕೆಶಿ ಜೊತೆಗಿರುವ ಸುರೇಶ್, ಮಂಗಳವಾರ ಹಾಗೂ ಬುಧವಾರ ಇಡೀ ದಿನ ಆರ್‌ಎಂಎಲ್ ಆಸ್ಪತ್ರೆಯಲ್ಲಿದ್ದುಕೊಂಡು ಸಹೋದರನ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಮಾಜಿ ಸಂಸದರಾದ ಧ್ರುವನಾರಾಯಣ್, ಚಂದ್ರಪ್ಪ ಮತ್ತು ಎಲ್.ಆರ್. ಶಿವರಾಮೇಗೌಡ ಅವರೂ ಜತೆಗಿದ್ದರು. 

ಪ್ರತಿಕ್ರಿಯಿಸಿ (+)