ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ವರಿತ ನ್ಯಾಯದಾನಕ್ಕೆ ಸಹಕಾರ ಅವಶ್ಯ’

Last Updated 17 ಮೇ 2018, 7:05 IST
ಅಕ್ಷರ ಗಾತ್ರ

ಶಹಾಪುರ: ನ್ಯಾಯಾಧೀಶರಾಗಿ ನೇಮಕವಾದ ಬಳಿಕ ನೇರವಾಗಿ ಇಲ್ಲಿಗೆ ಬಂದು ನ್ಯಾಯದಾನ ಮಾಡಲು ಅವಕಾಶ ಸಿಕ್ಕಿತು. 3 ವರ್ಷ 10 ತಿಂಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಅಲ್ಲದೇ ಹಿರಿಯ ವಕೀಲರ ಸಹಕಾರದಿಂದ ತ್ವರಿತ ನ್ಯಾಯದಾನ ಮಾಡಲು ಸಹಕಾರಿಯಾಯಿತು ಎಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಸಾತ್ವಿಕ ಹೇಳಿದರು.

ಇಲ್ಲಿನ ವಕೀಲರ ಸಂಘದ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಕೀಲರು ನಿರಂತರ ಅಧ್ಯಯನ ಮಾಡಬೇಕು. ಶಿಸ್ತು, ಸಂಯಮ ಹಾಗೂ ಸಮಯ ಪಾಲನೆಗೆ ಮಹತ್ವ ನೀಡಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಭಾಸ್ಕರರಾವ ಮುಡಬೂಳ, ಎಸ್‌.ಶೇಖರ, ಸಾಲೋಮನ್ ಆಲ್ಫ್ರೇಡ್, ಮಲ್ಲಿಕಾರ್ಜುನ ಬುಕ್ಕಲ್ ನ್ಯಾಯಾಧೀಶರ ಬಗ್ಗೆ ಅನಿಸಿಕೆ ಹಂಚಿಕೊಂಡರು.

ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ಹಾಗೂ ಹಿರಿಯ ವಕೀಲರಾದ ಎಂ.ಆರ್. ಮಾಲಿ ಪಾಟೀಲ್, ಚಂದ್ರಶೇಖರ ಲಿಂಗದಳ್ಳಿ, ಹನುಮೇಗೌಡ ಮರಕಲ್, ರಮೇಶ ದೇಶಪಾಂಡೆ, ಆರ್.ಎಂ.ಹೊನ್ನಾರಡ್ಡಿ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಶಾಂತಗೌಡ ಪಾಟೀಲ್,ಎಸ್‌.ಗೋಪಾಲ,ಯೂಸೂಫ್ ಸಿದ್ದಕಿ, ಮಲ್ಕಪ್ಪ ಪಾಟೀಲ್, ಮಲ್ಲಪ್ಪ ಪೂಜಾರಿ, ರಮೇಶ ಸೇಡಂಕರ್, ಸಂತೋಷ ಸತ್ಯಂಪೇಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT