ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು

7

ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು

Published:
Updated:

ಮೀರತ್ (ಉತ್ತರಪ್ರದೇಶ):  ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಮಾಲಾರ್ಪಣೆ ಮಾಡಿದ್ದ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆಯನ್ನು ಹಾಲು ಮತ್ತು ಗಂಗಾಜಲದಿಂದ ದಲಿತ ಸಮುದಾಯದ ವಕೀಲರು ಶುಕ್ರವಾರ ಸ್ವಚ್ಛಗೊಳಿಸಿದ್ದಾರೆ. 

ಜಿಲ್ಲಾ ನ್ಯಾಯಾಲಯದ ಬಳಿಯಿರುವ ಅಂಬೇಡ್ಕರ್ ಪ್ರತಿಮೆ ಬನ್ಸಾಲ್‌ ಅವರ ಸ್ಪರ್ಶದಿಂದ ಮೈಲಿಗೆಯಾಗಿತ್ತು ಎಂದು ವಕೀಲರು ಹೇಳಿದ್ದಾರೆ. 

ಬಿಜೆಪಿಯ ಬನ್ಸಾಲ್ ಅವರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದ್ದರು. ಆದ ಕಾರಣ ನಾವು ಅಂಬೇಡ್ಕರ್ ಪ್ರತಿಮೆಯನ್ನು ಪವಿತ್ರಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ದಲಿತರನ್ನು ಹತ್ತಿಕ್ಕುತ್ತಿದೆ ಎಂದು ಹೇಳಿದರು

ಅಂಬೇಡ್ಕರ್ ದಲಿತ ಚಳುವಳಿಯಲ್ಲಿ ‍ಪ್ರಮುಖ ಪಾತ್ರ ವಹಿಸಿದವರು. ಅಸ್ಪೃಶ್ಯತೆ ಸೇರಿದಂತೆ ಸಾಮಾಜಿಕ ಅಸಮಾನತೆ ವಿರುದ್ಧ ದಿಟ್ಟ ಹೋರಾಟ ನಡೆಸಿವರು. ಬಿಜೆಪಿ ಅಂಬೇಡ್ಕರ್‌ಗಾಗಿ ಏನನ್ನು ಮಾಡಿಲ್ಲ. ಆದರೆ ಅವರ ಹೆಸರನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ದಲಿತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು. 
 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 1

  Frustrated
 • 8

  Angry

Comments:

0 comments

Write the first review for this !