ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂಗೆ ‘ಡ್ಯಾನ್‌ ಡೇವಿಡ್‌’ ಪ್ರಶಸ್ತಿ

7
ಇತಿಹಾಸ ಸಂಶೋಧನೆಗೆ ಸಂದ ಗೌರವ

ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂಗೆ ‘ಡ್ಯಾನ್‌ ಡೇವಿಡ್‌’ ಪ್ರಶಸ್ತಿ

Published:
Updated:
Prajavani

ಜೆರುಸಲೇಂ: ಭಾರತ ಮೂಲದ ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ಡ್ಯಾನ್ ಡೇವಿಡ್‌ ಪ್ರಶಸ್ತಿ ಲಭಿಸಿದೆ.

ಆಧುನಿಕ ಯುಗದ ಆರಂಭದಲ್ಲಿ ಏಷಿಯನ್ನರು, ಯುರೋಪಿಯನ್ನರು, ಉತ್ತರ ಮತ್ತು ದಕ್ಷಿಣ ಅಮೆರಿಕದ ಜನರು ಸಾಂಸ್ಕೃತಿಕವಾಗಿ ಮುಖಾಮುಖಿಯಾದ ಬಗ್ಗೆ ಸಂಜಯ್ ಅವರು ಕೈಗೊಂಡ ಸಂಶೋಧನೆ–ಅಧ್ಯಯನವನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟೆಲ್‌ ಅವೀವ್‌ನಲ್ಲಿರುವ ಡ್ಯಾನ್‌ ಡೇವಿಡ್ ಪ್ರತಿಷ್ಠಾನ ತಿಳಿಸಿದೆ.

ಸಂಜಯ್‌ ಅವರು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್ ಅವರ ಸಹೋದರ. ಇತಿಹಾಸ ಕುರಿತ ಸಂಶೋಧನೆಗಾಗಿ ಸಂಜಯ್‌ ಅವರಿಗೆ ಇನ್ಫೊಸಿಸ್‌ ಪ್ರಶಸ್ತಿ ಸಹ ಲಭಿಸಿದೆ. ಸದ್ಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ವಿಭಾಗದಲ್ಲಿ ಇರ್ವಿಂಗ್‌ ಮತ್ತು ಜೀನ್‌ಸ್ಟೋನ್‌ ಅಧ್ಯಯನ ಪೀಠದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !