ಡಾನ್ಸ್‌ ಬಾರ್‌ ತೆರೆಯದಂತೆ ಸುಗ್ರೀವಾಜ್ಞೆ

7
ಮಹಾರಾಷ್ಟ್ರ ಸರ್ಕಾರದ ಚಿಂತನೆ: ಮುಂದಿನ ಸಂಪುಟದಲ್ಲಿ ಚರ್ಚೆ

ಡಾನ್ಸ್‌ ಬಾರ್‌ ತೆರೆಯದಂತೆ ಸುಗ್ರೀವಾಜ್ಞೆ

Published:
Updated:

ಮುಂಬೈ: ಡಾನ್ಸ್‌ ಬಾರ್‌ಗಳು ಮತ್ತೆ ಆರಂಭವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್‌ಗಳನ್ನು ಮತ್ತೆ ಆರಂಭಿಸಲು ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿಗೆ ನೀಡಿತ್ತು. ಹೀಗಾಗಿ, ರಾಜ್ಯ ಸರ್ಕಾರ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

‘ಮಹಾರಾಷ್ಟ್ರದ ಸಾಂಸ್ಕೃತಿಕ ಘನತೆಯನ್ನು ರಕ್ಷಿಸಲು ಡಾನ್ಸ್‌ ಬಾರ್‌ಗಳು ಮತ್ತೆ ತೆರೆಯದಂತೆ ಸುಗ್ರೀವಾಜ್ಞೆ ಜಾರಿಗೊಳಿಸಲು ಹಿಂಜರಿಯುವುದಿಲ್ಲ’ ಎಂದು ಹಣಕಾಸು ಮತ್ತು ಯೋಜನಾ ಸಚಿವ ಸುಧೀರ್‌ ಮುಂಗಾಂಟಿವಾರ್‌ ತಿಳಿಸಿದ್ದಾರೆ.

‘ಡಾನ್ಸ್‌ ಬಾರ್‌ಗಳಿಗೆ ಅವಕಾಶ ನೀಡಬಾರದು ಎನ್ನುವ ನಿಲುವಿಗೆ ರಾಜ್ಯ ಸರ್ಕಾರ ಈಗಲೂ ಬದ್ಧವಾಗಿದೆ. ಈ ವಿಷಯದ ಬಗ್ಗೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

‘ಮುಂದಿನ 15 ದಿನಗಳ ಒಳಗೆ ಸುಗ್ರೀವಾಜ್ಞೆ ಜಾರಿಗೊಳಿಸಲಾಗುವುದು. ಜತೆಗೆ, ಈಗಿರುವ ಕಾನೂನಿನಲ್ಲಿ ಕೆಲವು ಬದಲಾವಣೆ ಮಾಡಿ ಹೆಚ್ಚು ಬಲಗೊಳಿಸಲಾಗುವುದು’ ಎಂದು ಹೇಳಿದರು

ಸುಗ್ರೀವಾಜ್ಞೆ ಜಾರಿಗೊಳಿಸುವುದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಡಾನ್ಸ್‌ ಬಾರ್‌ಗಳ ವಿರುದ್ಧ ಕಾನೂನು ರೂಪಿಸಲು ಎಲ್ಲ ಪಕ್ಷಗಳು ಒಗ್ಗೂಡಿದ್ದವು. ಈ ಬಾರಿಯೂ ಅದೇ ರೀತಿ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !