ದತ್ತಾಂಶ ಕದಿಯಲು ಸಾಧ್ಯವಿಲ್ಲ: ಯುಐಡಿಎಐ ಸ್ಪಷ್ಟನೆ

7

ದತ್ತಾಂಶ ಕದಿಯಲು ಸಾಧ್ಯವಿಲ್ಲ: ಯುಐಡಿಎಐ ಸ್ಪಷ್ಟನೆ

Published:
Updated:

ನವದೆಹಲಿ (ಪಿಟಿಐ): ಸ್ಮಾರ್ಟ್‌ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ತನ್ನ ಸಹಾಯವಾಣಿ ಸಂಖ್ಯೆಯಿಂದ ಮೊಬೈಲ್‌ನಲ್ಲಿರುವ ಬಳಕೆದಾರರ ಖಾಸಗಿ ಮಾಹಿತಿ ಮತ್ತು ದತ್ತಾಂಶ (ಡೇಟಾ) ಕದಿಯಲು ಸಾಧ್ಯವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಭಾನುವಾರ ಸ್ಪಷ್ಟಪಡಿಸಿದೆ.

ಗೂಗಲ್‌ ಸಂಸ್ಥೆಯ ಪ್ರಮಾದದಿಂದಾಗಿ ಸ್ಮಾರ್ಟ್‌ಫೋನ್‌ಗಳ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ತನ್ನ ಹಳೆಯ ಮತ್ತು ಚಾಲನೆಯಲ್ಲಿ ಇಲ್ಲದ ಸಹಾಯವಾಣಿ ಸಂಖ್ಯೆ ಕಾಣಿಸಿಕೊಂಡಿದೆ ಎಂದು ಸಂಸ್ಥೆ ಹೇಳಿದೆ.

ಈ ಪ್ರಮಾದವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಕೆಲವರು ಆಧಾರ್‌ ಬಗ್ಗೆ ಜನರಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ದತ್ತಾಂಶ ಸುರಕ್ಷತೆ ಮತ್ತು ಖಾಸಗಿ ಮಾಹಿತಿ ಸೋರಿಕೆ ಕುರಿತು ಇಲ್ಲಸಲ್ಲದ ವದಂತಿ ಹರಡುವ ಮೂಲಕ ಆಧಾರ್‌ ವರ್ಚಸ್ಸು, ವಿಶ್ವಾಸರ್ಹತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಯುಐಡಿಎಐ ಅಸಮಾಧಾನ ವ್ಯಕ್ತಪಡಿಸಿದೆ.

ಎಲಿಯಟ್‌ ಅಲ್ಡರ್‌ಸನ್‌ ಎಂಬ ಹೆಸರಿನಲ್ಲಿ ಫ್ರಾನ್ಸ್‌ನ ಡೇಟಾ ಸುರಕ್ಷಿತಾ ತಜ್ಞರೊಬ್ಬರು, ಆಧಾರ್ ಸುರಕ್ಷತೆ ಮತ್ತು ವಿಶ್ವಾಸರ್ಹತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುಐಡಿಎಐಗೆ ನಿರಂತರವಾಗಿ ಸವಾಲು ಹಾಕುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !