ಸಂಸತ್ ಭವನದಲ್ಲಿ ಯೋಧರ ಸ್ಮರಣೆ: ಮಾತನಾಡದ ಮೋದಿ–ರಾಹುಲ್

7
ಸಂಸತ್ ಮೇಲಿನ ಉಗ್ರರ ದಾಳಿಗೆ 17 ವರ್ಷ

ಸಂಸತ್ ಭವನದಲ್ಲಿ ಯೋಧರ ಸ್ಮರಣೆ: ಮಾತನಾಡದ ಮೋದಿ–ರಾಹುಲ್

Published:
Updated:
Deccan Herald

ನವದೆಹಲಿ: 2001ರಲ್ಲಿ ಸಂಸತ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದರು. 

ಘಟನೆ ನಡೆದು 17 ವರ್ಷಗಳು ಸಂದ ನಿಮಿತ್ತ ಟ್ವೀಟ್ ಮಾಡಿದ ಅವರು, ಯೋಧರ ಶೌರ್ಯ ಸಾಹಸಗಳು ಜನರಿಗೆ ಪ್ರೇರಣೆ ಎಂದಿದ್ದಾರೆ. 

ಸಂಸತ್‌ ಭವನದಲ್ಲಿ ಹುತಾತ್ಮರ ಸ್ಮರಣೆ ಕಾರ್ಯಕ್ರಮ ನಡೆಯಿತು. ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ  ಭಾಗಿಯಾಗಿದ್ದರು. ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. 

ಡಿಸೆಂಬರ್ 13ರಂದು ಸಂಸತ್‌ ಭವನಕ್ಕೆ ನುಗ್ಗಿದ್ದ ಬಂದೂಕುಧಾರಿಗಳು ದೆಹಲಿಯ ಐವರು ಪೊಲೀಸರು, ಕೇಂದ್ರೀಯ ಮೀಸಲುಪಡೆಯ ಮಹಿಳಾ ಅಧಿಕಾರಿ, ಸಂಸತ್‌ ಭವನದ ಇಬ್ಬರು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. 

**

ಮಾತನಾಡದ ಮೋದಿ–ರಾಹುಲ್

ಸಂಸತ್ ಭವನದಲ್ಲಿ ಗುರುವಾರ ನಡೆದ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತರ ಕಾಯ್ದುಕೊಂಡರು.

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು, ಬಿಜೆಪಿಯು ಅಧಿಕಾರ ಕಳೆದುಕೊಂಡ ಎರಡು ದಿನಗಳ ಬಳಿಕ ಒಂದೇ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಭಾಗಿಯಾಗಿದ್ದರು. ಆದರೆ ಪರಸ್ಪರ ಮಾತನಾಡಲಿಲ್ಲ. 

ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುಶಲೋಪರಿ ವಿಚಾರಿಸಿದ್ದು ಕಂಡುಬಂದಿತು. ಕೇಂದ್ರ ಸಚಿವರಾದ ವಿಜಯ್ ಗೋಯಲ್ ಹಾಗೂ ರಾಮದಾಸ್ ಆಠವಲೆ ಅವರು ರಾಹುಲ್ ಅವರ ಕೈಕುಲುಕಿದರು. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !