ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್‌ಗೆ ನೋಟಿಸ್‌

7

ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್‌ಗೆ ನೋಟಿಸ್‌

Published:
Updated:
ಮೇಧಾ ಪಾಟ್ಕರ್‌

ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿ.ಕೆ. ಸಕ್ಸೇನಾ ಅವರು ಹೂಡಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಮದಾ ಬಜಾವೊ ಆಂದೋಲನ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಅವರಿಗೆ ದೆಹಲಿ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. 

ಸುದ್ದಿ ವಾಹಿನಿಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಕ್ಸೇನಾ ದಾಖಲಿಸಿದ್ದ ದೂರಿನ ಮೇರಿಗೆ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್ ನಿಶಾಂತ್‌ ಗರ್ಗ್‌ ನೋಟಿಸ್‌ ಜಾರಿ ಮಾಡಿದ್ದಾರೆ. 

ಸಕ್ಸೇನಾ ಸಲ್ಲಿಸಿರುವ ಧ್ವನಿಮುದ್ರಣ ಸಾಕ್ಷ್ಯದ ಆಧಾರದ ಮೇಲೆ ನ್ಯಾಯಾಲಯ ಐಪಿಸಿ ಸೆಕ್ಷನ್ 499/500(ಮಾನನಷ್ಟ) ಅಡಿ ನೋಟಿಸ್‌ ನೀಡಿದೆ. ಸಕ್ಸೇನಾ ಹಾಗೂ ಮೇಧಾ ಪಾಟ್ಕರ್ ನಡುವೆ 18 ವರ್ಷಗಳಿಂದ ಕಾನೂನು ಸಮರ ನಡೆಯುತ್ತಿದೆ. ತಮ್ಮ ಹಾಗೂ ನರ್ಮದಾ ಬಚಾವೊ ಆಂದೋಲನ (ಎನ್‌ಬಿಎ) ವಿರುದ್ಧ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದು ಮೇಧಾ ಪಾಟ್ಕರ್ ಪ್ರಕರಣ ದಾಖಲಿಸಿದ್ದರೆ, ಅವರ ವಿರುದ್ಧ ಸಕ್ಸೇನಾ ಎರಡು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !