ಸೇನೆಗೆ ಹೊಸ ಫಿರಂಗಿ ವ್ಯವಸ್ಥೆ

7
2016ರ ನವೆಂಬರ್‌ನಲ್ಲಿ ಅಮೆರಿಕದ ಜತೆ ಭಾರತ ಒಪ್ಪಂದ

ಸೇನೆಗೆ ಹೊಸ ಫಿರಂಗಿ ವ್ಯವಸ್ಥೆ

Published:
Updated:
Deccan Herald

ಡಿಯೊಲಾಲಿ (ಮಹಾರಾಷ್ಟ್ರ): ಸೇನೆಗೆ ಮೂರು ಪ್ರಮುಖ ಫಿರಂಗಿ‌ಗಳನ್ನು ಒಳಗೊಂಡ ವ್ಯವಸ್ಥೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಸೇರ್ಪಡೆ ಮಾಡಿದರು.

ಈ ಮೂಲಕ, ಅಮೆರಿಕದ ಎಂ.777 ಅತಿ ಲಘು ಹೊವಿಟ್ಜರ್‌ ಫಿರಂಗಿ, ಕೆ–9 ವಜ್ರ ಸ್ವಯಂಚಾಲಿತ ಫಿರಂಗಿ ಮತ್ತು ಫಿರಂಗಿ ಸಾಗಾಟ ವಾಹನವು ಭಾರತೀಯ ಸೇನೆಯ ಸೇವೆಗೆ ಲಭ್ಯವಾಗಲಿವೆ.

ಎಂ.777 ಶ್ರೇಣಿಯ 145 ಹೊವಿಟ್ಜರ್‌ ಫಿರಂಗಿಗಳನ್ನು ಹೊಂದಲು 2016ರ ನವೆಂಬರ್‌ನಲ್ಲಿ ಅಮೆರಿಕ ಸರ್ಕಾರದ ಜತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ವಿದೇಶಿ ಸೇನಾ ಸಲಕರಣೆ ಮಾರಾಟ ಕಾರ್ಯಕ್ರಮದಡಿ ಇದಕ್ಕಾಗಿ ₹5,070 ಕೋಟಿ ವ್ಯಯಿಸಲಾಗುತ್ತದೆ.

ಎಂ.777 ಅನ್ನು ಇರಾಕ್‌ ಮತ್ತು ಅಫ್ಗಾನಿಸ್ತಾನದ ಸೇನಾ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ. ಹೆಲಿಕಾಪ್ಟರ್ ಮೂಲಕ ಎತ್ತರದ ಸ್ಥಳಗಳಿಗೆ ಇವನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !