ವಾಯುಪಡೆ ಬಲವರ್ಧಿಸಲಿವೆ ರಫೇಲ್‌, ಎಸ್‌–400 ಡೀಲ್‌: ಐಎಎಫ್‌ ಮುಖ್ಯಸ್ಥ ಧನೋವಾ

7

ವಾಯುಪಡೆ ಬಲವರ್ಧಿಸಲಿವೆ ರಫೇಲ್‌, ಎಸ್‌–400 ಡೀಲ್‌: ಐಎಎಫ್‌ ಮುಖ್ಯಸ್ಥ ಧನೋವಾ

Published:
Updated:

ನವದೆಹಲಿ: ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ನಿಗದಿತ ಸಮಯದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯದ ಬಗ್ಗೆ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಬುಧವಾರ ಪ್ರಶ್ನೆ ಮಾಡಿದ್ದಾರೆ. 

ಸುಖೋಯ್‌–30, ಜಾಗ್ವಾರ್‌, ಮಿರೇಜ್‌–2000 ಹಾಗೂ ಹಗುರ ಯುದ್ಧ ವಿಮಾನಗಳನ್ನು ತಯಾರಿಸುವಲ್ಲಿ ಎಚ್‌ಎಎಲ್‌ ತಡ ಮಾಡಿರುವುದನ್ನು ಪ್ರಸ್ತಾಪಿಸಿ, ಯೋಜನೆ ಪೂರ್ಣಗೊಳಿಸುವಲ್ಲಿ ಎರಡರಿಂದ ಆರು ವರ್ಷಗಳ ವರೆಗೂ ವಿಳಂಬವಾಗಿದೆ ಎಂದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.  

ಇದನ್ನೂ ಓದಿ: ಎಚ್‌ಎಎಲ್‌ ದಾಖಲೆ ವಹಿವಾಟು

ಅಕ್ಟೋಬರ್‌ 8ರ ಭಾರತೀಯ ವಾಯುಪಡೆ ದಿನದ ವಿಚಾರವಾಗಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಧನೋವಾ ಮಾತನಾಡಿದರು. ವಾಯುಪಡೆ ಸಾಮರ್ಥ್ಯ ಕಂಡುಕೊಳ್ಳುವ ’ಗಗನ್‌ ಶಕ್ತಿ’ ಅಭ್ಯಾಸದಲ್ಲಿ ಎಚ್‌ಎಎಲ್‌ ನೀಡಿದ ಬೆಂಬಲವನ್ನು ಸ್ಮರಿಸುವ ಜತೆಗೆ ಹಲವು ಯೋಜನೆಗಳಲ್ಲಿ ಯುದ್ಧ ವಿಮಾನಗಳ ಪೂರೈಕೆ ವಿಳಂಬ ಮಾಡಿರುವುದಾಗಿಯೂ ಹೇಳಿದ್ದಾರೆ. 

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ಅವರು, ರಫೇಲ್‌ ಯುದ್ಧ ವಿಮಾನ ಮತ್ತು ಎಸ್‌–400 ಕ್ಷಿಪಣಿ ವ್ಯವಸ್ಥೆಗಳಿಂದ ಭಾರತೀಯ ವಾಯುಪಡೆಯ ಬಲವರ್ಧನೆಯಾಗಲಿದ್ದು, ಬೃಹತ್‌ ಬದಲಾವಣೆ ಕಾಣಲಿದೆ ಎಂದಿದ್ದಾರೆ. ’ತಂತ್ರಜ್ಞಾನದ ಹಸ್ತಾಂತರ ಮತ್ತು ವಿಮಾನ ಉತ್ಪಾದನೆಯ ವಿಷಯಗಳು ಬಗೆಹರಿಯದ ಹೊರತು, ಬಿಕ್ಕಟ್ಟಿನಲ್ಲಿರುವ 126 ಜೆಟ್‌ಗಳ ಖರೀದಿ ಮಾತುಕತೆ ಹೇಗೆ ಮುಂದುವರಿಯಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. 

ಇನ್ನಷ್ಟು ಓದು: ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

₹59 ಸಾವಿರ ಕೋಟಿ ಮೌಲ್ಯದ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಿತ್ಯ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭಾರತದಲ್ಲಿಯೇ ರಫೇಲ್‌ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇರುವುದಾಗಿ ಮಾಜಿ ಅಧ್ಯಕ್ಷ ಟಿ.ಸುವರ್ಣ ರಾಜು ಇತ್ತೀಚೆಗೆ ಹೇಳಿಕೆ ನೀಡಿದ್ದರು. 

ಮತ್ತಷ್ಟು: ರಫೇಲ್‌: ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದವಾಗಿರಲಿಲ್ಲ- ರಕ್ಷಣಾ ಸಚಿವೆ ನಿರ್ಮಲಾ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !