ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕೋವಿಡ್ -19ನಿಂದಾಗಿ ಸಾವಿಗೀಡಾದ ಮಹಿಳೆಯ ಮಗನಿಗೂ ಸೋಂಕು

Last Updated 15 ಮಾರ್ಚ್ 2020, 6:05 IST
ಅಕ್ಷರ ಗಾತ್ರ

ದೆಹಲಿ: ದೆಹಲಿಯಲ್ಲಿ ಕೋವಿಡ್ 19 ಸೋಂಕಿನಿಂದಾಗಿಸಾವಿಗೀಡಾಗಿದ್ದ ಮಹಿಳೆಯ ಮಗನಿಗೂ ಈ ಸೋಂಕು ತಗಲಿದ್ದು, ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ.

ಶುಕ್ರವಾರ ಕೊರೊನಾ ಸೋಂಕಿನಿಂದ 69 ವರ್ಷದ ವೃದ್ಧ ಮಹಿಳೆಯೊಬ್ಬರು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಮಗನಿಗೂ ಈ ಸೋಂಕು ತಗುಲಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ.

46ರ ಹರೆಯದ ಈ ವ್ಯಕ್ತಿ ರಾಜಸ್ಥಾನದಲ್ಲಿ ವಾಸಿಸುತ್ತಿದ್ದು, ಕೊರೊನಾ ಸೋಂಕು ಪತ್ತೆಯಾದ ಕೂಡಲೇ ಇವರನ್ನು ಸಫ್ದಾರ್‌ಗಂಜ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಸ್ಥಳದಲ್ಲಿರಿಸಿ ನಿಗಾವಹಿಸಲಾಗಿದೆ.

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಮಾರ್ಚ್ 14ರಂದು ವಾಪಸ್ ಆಗಿದ್ದ 6 ಪ್ರಯಾಣಿಕರನ್ನು ಕೂಡಾ ಇದೇ ರೀತಿ ಪ್ರತ್ಯೇಕವಾಗಿ ಇರಿಸಲಾಗಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT