ಲೋಕಸಭೆ ಚುನಾವಣೆ: ಸುಳ್ಳು ಸುದ್ದಿ ತಡೆಗೆ ಬಿಜೆಪಿಯಿಂದ 1800 ವಾಟ್ಸ್ಆ್ಯಪ್ ಗ್ರೂಪ್

7

ಲೋಕಸಭೆ ಚುನಾವಣೆ: ಸುಳ್ಳು ಸುದ್ದಿ ತಡೆಗೆ ಬಿಜೆಪಿಯಿಂದ 1800 ವಾಟ್ಸ್ಆ್ಯಪ್ ಗ್ರೂಪ್

Published:
Updated:

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಕಾರ್ಯಕರ್ತರ 1800 ವಾಟ್ಸ್ಆ್ಯಪ್ ಗುಂಪುಗಳನ್ನು ಕ್ರಿಯೇಟ್ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ಸುಳ್ಳು ಸುದ್ದಿ ಪ್ರಸರಣ ತಡೆಯುವುದಕ್ಕಾಗಿ ಈ ಎಲ್ಲ ಗುಂಪುಗಳಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ.

ಲೋಕಸಭಾ ಕ್ಷೇತ್ರ ಮಟ್ಟದಲ್ಲಿ ಪ್ರಚಾರಕ್ಕಾಗಿ ಅಲ್ಲಿನ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಈ ವಾಟ್ಸ್ಆ್ಯಪ್ ಗುಂಪು ಕ್ರಿಯೇಟ್ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ 1800 ಗ್ರೂಪ್‍ಗಳನ್ನು ಕ್ರಿಯೇಟ್ ಮಾಡಲಾಗಿದೆ. ಗ್ರೂಪ್‍ಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಪಕ್ಷಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ತಡೆಯಲು ವಾಟ್ಸ್ಆ್ಯಪ್ ಗ್ರೂಪ್‍ಗಳು ನೆರವಾಗಲಿವೆ ಎಂದು ಬಿಜೆಪಿ ಮಾಧ್ಯಮ ವ್ಯವಹಾರಗಳ ಮುಖ್ಯಸ್ಥ  ನೀಲಕಾಂತ್ ಭಕ್ಷಿ ಹೇಳಿದ್ದಾರೆ.

ಈ ಗ್ರೂಪ್‌‍ಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು  ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸದಸ್ಯರಾಗಿರುತ್ತಾರೆ ಎಂದು ಭಕ್ಷಿ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !