ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲಕಿಯ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆಯೂ ಅತ್ಯಾಚಾರ’

Last Updated 27 ಜುಲೈ 2019, 19:56 IST
ಅಕ್ಷರ ಗಾತ್ರ

ನವದೆಹಲಿ: ‘ಬಾಲಕಿ ಸಮ್ಮತಿ ಪಡೆದು ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರವೇ’ ಎಂದಿರುವ ದೆಹಲಿ ಕೋರ್ಟ್‌, ಆರು ವರ್ಷದ ಹಿಂದಿನ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಅಪರಾಧಿ ಎಂದು ಘೋಷಿಸಿದೆ.

15 ವರ್ಷ ವಯಸ್ಸಿನ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪರ್ವೇಶ್‌ ರಾಣಾ (30), ಆಶೀಶ್‌ ಸೆಹ್ರಾವತ್‌ (41) ಅವರಿಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಉಮೇದ್‌ ಸಿಂಗ್‌ ಗ್ರೆವಾಲ್‌ ಸಜೆ ವಿಧಿಸಿದರು.

ಕ್ರಮವಾಗಿ ರಾಣಾ, ಸೆಹ್ರಾವತ್‌ಗೆ ₹ 40 ಸಾವಿರ, ₹ 60 ಸಾವಿರ ದಂಡ ವಿಧಿಸಿದ ಕೋರ್ಟ್‌, ಇದರಲ್ಲಿ ₹ 80 ಸಾವಿರವನ್ನು ಬಾಲಕಿಗೆ ಪರಿಹಾರ ನೀಡಲು ಆದೇಶಿಸಿತು.

‘ಕೃತ್ಯ 2009ರಲ್ಲಿ ನಡೆದಿದೆ. ಆಗ ಬಾಲಕಿಗೆ 15 ವರ್ಷ. ಐಪಿಸಿ ಸೆಕ್ಷನ್‌ 375 ಅನ್ವಯ 16 ವರ್ಷದೊಳಗಿನ ಬಾಲಕಿ ಜೊತೆ ಸಮ್ಮತಿ ಪಡೆದು ನಡೆಸಿದ ಲೈಂಗಿಕಕ್ರಿಯೆಯನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ’ ಎಂದು ನ್ಯಾಯಾಧೀಶರು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT