ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2ಗೆ 1ಕೆಜಿ ಗೋಧಿ ಹಿಟ್ಟು, ಮನೆ ಮನೆಗೂ ಕುಡಿಯವ ನೀರು: ದೆಹಲಿ ಬಿಜೆಪಿ  ಭರವಸೆ

Last Updated 31 ಜನವರಿ 2020, 14:05 IST
ಅಕ್ಷರ ಗಾತ್ರ

ದೆಹಲಿ: ದೆಹಲಿ ಬಿಜೆಪಿ ಘಟಕವು ಶುಕ್ರವಾರ ಚುನಾವಣಾ ಪ್ರಣಾಳಿಕೆ 'ದೆಹಲಿಸಂಕಲ್ಪ ಪತ್ರ'ವನ್ನು ಪ್ರಕಟಿಸಿದೆ. ಬಡವರಿಗೆ ₹2ಗೆ 1 ಕೆಜಿ ಗೋಧಿ ಹಿಟ್ಟುಮತ್ತು ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಾಗಿ ಪಕ್ಷ ಭರವಸೆ ನೀಡಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್, ಹರ್ಷ್ ವರ್ಧನ್, ದೆಹಲಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಮತ್ತು ಸಂಸದರ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ.

ಚುನಾವಣಾ ಪ್ರಣಾಳಿಕೆ ಬಿಡುಗಡೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗಡ್ಕರಿ, ದೆಹಲಿಯಲ್ಲಿ ಬಿಜೆಪಿ ಪಕ್ಷ ಬುಲೆಟ್ ರೈಲು ಆರಂಭಿಸಲಿದೆಎಂದಿದ್ದಾರೆ. ಬಿಜೆಪಿಯ ಇತಿಹಾಸವುದೆಹಲಿಯೊಂದಿಗೆ ನಂಟು ಹೊಂದಿದ್ದುದೆಹಲಿಯ ಭವಿಷ್ಯವನ್ನೇ ಬದಲಿಸಲಿದೆ ಎಂದಿದ್ದಾರೆ.

ಇದರ ಜತೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ನಿಧಿಯನ್ನೂ ದೆಹಲಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿದೆ ಬಿಜೆಪಿ ಹೇಳಿದೆ.
ಖಾಲಿಯಿರುವ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸುವುದಾಗಿ ಭಾರತೀಯ ಜನತಾ ಪಕ್ಷವುದೆಹಲಿಯ ಜನರಿಗೆ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT