ಸೋಮವಾರ, ಫೆಬ್ರವರಿ 24, 2020
19 °C

ದೆಹಲಿ ಚುನಾವಣೆಯಲ್ಲಿ ಶೇ.62.59 ಮತದಾನ: ಚುನಾವಣಾ ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Delhi Election Commission

ದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ.62.59 ಮತದಾನವಾಗಿದೆ ಎಂದು ಚುನಾವಣಾ ಆಯೋಗ  ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಹೇಳಿದೆ.

 70 ಸೀಟುಗಳಿರುವ ದೆಹಲಿ ವಿಧಾನಸಭೆಗೆ ಶನಿವಾರ ಮತದಾನ ನಡೆದಿತ್ತು. ಆದಾಗ್ಯೂ ಮತದಾನ ಪ್ರಕ್ರಿಯೆ ನಡೆದ ನಂತರ ಮತದಾನದ ಅಂತಿಮ ಶೇಕಡಾವಾರು ಪ್ರಮಾಣವನ್ನು ಪ್ರಕಟಿಸಲು ವಿಳಂಬ ಮಾಡಿದ ಚುನಾವಣಾ ಆಯೋಗ ವಿರುದ್ಧ ಆಮ್ ಆದ್ಮಿ ಪಕ್ಷ ಕಿಡಿಕಾರಿತ್ತು.

ಚುನಾವಣಾ ಆಯೋಗದ ಅಂಕಿ ಅಂಶ ಪ್ರಕಾರ  2015ರ ವಿಧಾನಸಭಾ ಚುನಾವಣೆಗೆ ನಡೆದ ಮತದಾನಕ್ಕಿಂತ ಶೇ. 5ರಷ್ಟು ಮತದಾನ ಪ್ರಮಾಣ ಇಳಿಕೆ ಕಂಡಿದೆ. ಚಾಂದ್ನಿ ಚೌಕ್‌ನ ಬಲ್ಲಿಮಾರಾನ್‌ನಲ್ಲಿ ಅತೀ ಹೆಚ್ಚು ಅಂದರೆ  ಶೇ. 71.16 ಮತದಾನವಾಗಿದೆ. ಅದೇ ವೇಳೆ ದೆಹಲಿ ಕಂಟೋನ್ಮೆಂಟ್‌ನಲ್ಲಿ ಅತೀ ಕಡಿಮೆ ಅಂದರೆ ಶೇ. 45.5 ಮತದಾನವಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ. 13,780 ಮತಗಟ್ಟೆಯಲ್ಲಿನ ಮಾಹಿತಿಗಳನ್ನು ಚುನಾವಣಾ ಆಯೋಗ ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. 

ಏತನ್ಮಧ್ಯೆ ದೆಹಲಿಯಲ್ಲಿ ಇವಿಎಂ  ದುರ್ಬಳಕೆಯಾಗಿದೆ ಎಂಬ ಆರೋಪವನ್ನು ಆಯೋಗ ತಿರಸ್ಕರಿಸಿದೆ.

ಇದನ್ನೂ ಓದಿ'ನಿಜಕ್ಕೂ ಆಘಾತಕಾರಿ': ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ ಅರವಿಂದ ಕೇಜ್ರಿವಾಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು