ಅಗ್ನಿ ದುರಂತ: ಮೂವರ ಸಾವು

ಭಾನುವಾರ, ಜೂಲೈ 21, 2019
26 °C

ಅಗ್ನಿ ದುರಂತ: ಮೂವರ ಸಾವು

Published:
Updated:
Prajavani

ನವದೆಹಲಿ: ಷಹ್‌ದಾರದ ಝೀಲ್‌ಮಿಲ್‌ ಕೈಗಾರಿಕಾ ಪ್ರದೇಶದಲ್ಲಿನ ರಬ್ಬರ್‌–ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. 

ಮೃತರನ್ನು ಮಂಜೂ, ಸಂಗೀತಾ ಮತ್ತು ಶೋಯಿಬ್‌ ಎಂದು ಗುರುತಿಸ ಲಾಗಿದೆ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವಘಡ ನಡೆದಿದ್ದು, ಅಗ್ನಿಶಾಮಕ ದಳದ 31 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ  ಕಾರ್ಯಾಚರಣೆ ಆರಂಭಿಸಿದರು. ದುರಂತಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ ಎಂದು ಡಿಸಿಪಿ ಮೇಘನಾ ಯಾದವ್‌ ತಿಳಿಸಿದ್ದಾರೆ.  

ಮನೆ ಬಳಕೆಯ ಪ್ಲಾಸ್ಟಿಕ್‌ ಮತ್ತು ರಬ್ಬರ್‌ ಸಾಮಾನುಗಳನ್ನು ತಯಾರಿ ಸುವ ಕಾರ್ಖಾನೆ ಇದಾಗಿದ್ದು, ಕಾರ್ಖಾನೆ ಕಟ್ಟಡ ಮೂರು ಮಹಡಿಯನ್ನು ಒಳಗೊಂಡಿದೆ.  ಘಟನಾ ಸ್ಥಳಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !