ಗುರುವಾರ , ಮಾರ್ಚ್ 4, 2021
26 °C

ಪಳನಿಸ್ವಾಮಿ ಅಹವಾಲು: ಸೆ. 13ರ ತನಕ ನಿರ್ಧಾರ ಬೇಡ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ರದ್ದುಗೊಳಿಸುವ ಸಂಬಂಧ ಪಕ್ಷದ ಸಂವಿಧಾನಕ್ಕೆ ತರಲಾದ ತಿದ್ದುಪಡಿ ವಿರೋಧಿಸಿರುವ ಎಐಎಡಿಎಂಕೆ ಮಾಜಿ ವಕ್ತಾರ ಕೆ.ಸಿ.ಪಳನಿಸ್ವಾಮಿ ಅವರ ಅಹವಾಲು ಕುರಿತಂತೆ ಸೆಪ್ಟೆಂಬರ್‌ 13ರ ವರೆಗೆ ನಿರ್ಧಾರ ಕೈಗೊಳ್ಳದಂತೆ’ ದೆಹಲಿ ಹೈಕೋರ್ಟ್‌ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ರೇಖಾ ಪಳ್ಳಿ ಅವರನ್ನು ಒಳಗೊಂಡ ಪೀಠ ಈ ನಿರ್ದೇಶನ ನೀಡಿದೆ.

ಈ ತಿದ್ದುಪಡಿಗೆ ಸಂಬಂಧಿಸಿದಂತೆ ಪಳನಿಸ್ವಾಮಿ ಅಹವಾಲಿಗೆ ಪ್ರಾತಿನಿಧ್ಯ ನೀಡುವ ಕುರಿತು ನಾಲ್ಕು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ಚುನಾವಣಾ ವಿಭಾಗಕ್ಕೆ ಆಗಸ್ಟ್‌ 10ರಂದು ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅರ್ಜಿ ಸಲ್ಲಿಸಿದ್ದರು. ‘ಯಾವುದೇ ವಿಚಾರಣೆ ನಡೆಸದೇ, ನ್ಯಾಯಮೂರ್ತಿಯೊಬ್ಬರು ಆಗಸ್ಟ್‌ 10ರಂದು ಆದೇಶಿಸಿದ್ದಾರೆ’ ಎಂದು ಪನ್ನೀರ್‌ಸೆಲ್ವಂ ಪರ ವಕೀಲರು ಪೀಠಕ್ಕೆ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು