ಸೋಮವಾರ, ಫೆಬ್ರವರಿ 17, 2020
19 °C

'ಛಪಾಕ್' ಸಿನಿಮಾದಲ್ಲಿ ನನ್ನ ಹೆಸರು ತೋರಿಸಿಲ್ಲ: ಹೈಕೋರ್ಟ್‌‌ಗೆ ವಕೀಲೆ ಅಪರ್ಣಾಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 'ಛಪಾಕ್ ' ಸಿನಿಮಾದಲ್ಲಿ ತನ್ನ ಹೆಸರು ತೋರಿಸುತ್ತಿಲ್ಲ ಎಂದು ನಿರ್ಮಾಪಕರ ವಿರುದ್ಧ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಯ ಪರ ವಕೀಲೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಹೈಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿರುವ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಲಕ್ಷ್ಮಿಯ ಪರ ವಕೀಲೆ ಅಪರ್ಣಾ ಭಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಯನ್ನು ಜನವರಿ 29ಕ್ಕೆ ಹೈಕೋರ್ಟ್ ಮುಂದೂಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಮಹಿಳೆಯ ಪರ ವಕೀಲರಾಗಿ ನಾನು ಆ್ಯಸಿಡ್ ದಾಳಿ ಪ್ರಕರಣದಲ್ಲಿ ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ಮಹಿಳೆಯ ಕುರಿತು ಸಿನಿಮಾ ಮಾಡುವಾಗ ನನ್ನ ಹೆಸರನ್ನೂ ಸಿನಿಮಾದಲ್ಲಿ ಸೇರಿಸಬೇಕಾಗಿತ್ತು. ಸಿನಿಮಾ ನಿರ್ಮಾಪಕರು ಇದನ್ನು ನಿರ್ಲಕ್ಷಿಸಿದ್ದಾರೆ. ಇವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

ಈ ವಿಷಯಕ್ಕೆ ಸಂಬಂಧಿಸಿದಂತೆ ಜನವರಿ 11ರಂದು ದೆಹಲಿ ಹೈಕೋರ್ಟ್ ಆದೇಶ ನೀಡಿ, ನನ್ನ ಹೆಸರನ್ನೂ ತೋರಿಸಬೇಕು ಎಂದು ತಿಳಿಸಿತ್ತು. ಈ ಆದೇಶವನ್ನೂ ನಿರ್ಮಾಪಕರು ಪಾಲಿಸಿಲ್ಲ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು