ದೆಹಲಿ ಮೆಟ್ರೊ ಸ್ಟೇಷನ್ ಸಮೀಪ ಭೂಕುಸಿತ: ಮಣ್ಣಿನಲ್ಲಿ ಸಿಲುಕಿತು ಕಾರು, ಆಟೊ

7

ದೆಹಲಿ ಮೆಟ್ರೊ ಸ್ಟೇಷನ್ ಸಮೀಪ ಭೂಕುಸಿತ: ಮಣ್ಣಿನಲ್ಲಿ ಸಿಲುಕಿತು ಕಾರು, ಆಟೊ

Published:
Updated:

ನವದೆಹಲಿ: ವಾಹನದಟ್ಟಣೆ ಹೆಚ್ಚಾಗಿರುವ ದೆಹಲಿಯ ರಸ್ತೆಯೊಂದರಲ್ಲಿ ಸೋಮವಾರ ಸಂಜೆ ಭೂಕುಸಿತ ಸಂಭವಿಸಿದ್ದು ಕಾರು ಮತ್ತು ಆಟೊರಿಕ್ಷಾ ಮಣ್ಣಿನಡಿ ಸಿಲುಕಿದವು. ಮೆಟ್ರೊ ಸ್ಟೇಷನ್‌ ಕೆಳಗೇ ಭೂಕುಸಿತ ಸಂಭವಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪೂರ್ವ ದೆಹಲಿಯ ಶಾಹ್‌ದಾರಾ ಬಳಿ ಇರುವ ಮೌಜ್‌ಪುರ್–ಬಾಬರ್‌ಪುರ್ ಮೆಟ್ರೊಸ್ಟೇಷನ್‌ ಸಮೀಪ ದುರ್ಘಟನೆ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಕಾರಿನಲ್ಲಿದ್ದ ಇಬ್ಬರು ಮತ್ತು ಆಟೊದಲ್ಲಿದ್ದ ಓರ್ವ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಾಹನಗಳಲ್ಲಿ ಸಿಲುಕಿದ್ದ ಅವರನ್ನು ಸಾರ್ವಜನಿಕರು ಹೊರಗೆಳೆದು ರಕ್ಷಿಸಿದರು. 

ಘಟನಾ ಸ್ಥಳದಲ್ಲಿ ಅಪಾರ ಜನಸಂದಣಿ ಸೇರಿತ್ತು. ರಸ್ತೆಯ ಮಧ್ಯೆ ಕಾಣಿಸಿಕೊಂಡಿರುವ ದೊಡ್ಡ ಗುಂಡಿಯನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !