ಬುಧವಾರ, ನವೆಂಬರ್ 20, 2019
26 °C

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್‌ ಚುನಾವಣೆಯಲ್ ಎಬಿವಿಪಿಗೆ 3 ಸ್ಥಾನ

Published:
Updated:
Prajavani

ನವದೆಹಲಿ : ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಯೂನಿಯನ್‌ಗೆ (ಡಿಯುಎಸ್‌ಯು) ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಗೆದ್ದುಕೊಂಡಿದ್ದರೆ, ಒಂದು ಸ್ಥಾನವನ್ನು ಎನ್‌ಎಸ್‌ಯುಐ ತನ್ನದಾಗಿಸಿಕೊಂಡಿದೆ.

ಯೂನಿಯನ್‌ನ ಅಧ್ಯಕ್ಷ ಸ್ಥಾನ ಸೇರಿದಂತೆ ಮೂರು ಸ್ಥಾನಗಳು ಎಬಿವಿಪಿ ಪಾಲಾಗಿದ್ದು,  ಕಾರ್ಯದರ್ಶಿ ಸ್ಥಾನಕ್ಕೆ ಎನ್‌ಎಸ್‌ಯುಐ ತೃಪ್ತಿಪಟ್ಟುಕೊಂಡಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ಅಶ್ವಿತ್‌ ದಹಿಯಾ ಜಯಶಾಲಿಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರದೀಪ್ ತನ್ವರ್‌ , ಜಂಟಿ ಕಾರ್ಯದರ್ಶಿಯಾಗಿ ಶಿವಾಂಗಿ ಖರ್ವಾಲ್‌, ಕಾರ್ಯದರ್ಶಿಯಾಗಿ ಎನ್‌ಎಸ್‌ಯುಐನ ಆಶೀಶ್‌ ಲಂಬಾ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)