ಮಂಗಳವಾರ, ಆಗಸ್ಟ್ 3, 2021
28 °C

ದೆಹಲಿಯ ಆರೋಗ್ಯ ಸೇವೆ ಸ್ಥಳೀಯರಿಗೆ ಮಾತ್ರ ಮೀಸಲಿರಲಿ: ಸಮಿತಿ ಶಿಫಾರಸು  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಯನ್ನು ಸ್ಥಳೀಯರಿಗೆ ಮಾತ್ರವೇ ಮೀಸಲಿಡಬೇಕು ಎಂದು ಎಎಪಿ ಸರ್ಕಾರ ರಚಿಸಿದ್ದ ಐವರು ಸದಸ್ಯರ ವೈದ್ಯರ ಸಮಿತಿಯು ಶಿಫಾರಸು ಮಾಡಿದೆ. 

ಆರೋಗ್ಯ ಸೇವೆಯನ್ನು ನಮ್ಮ ನಿವಾಸಿಗಳ ಚಿಕಿತ್ಸೆಗೆ ಮಾತ್ರವೇ ಬಳಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ತಿಳಿಸಿದೆ. 

ದೆಹಲಿಯ ಆಸ್ಪತ್ರೆಗಳಲ್ಲಿ ಹೊರಗಿನವರ ಚಿಕಿತ್ಸೆಗೆ ಅನುಮತಿಸಿದರೆ, ಇನ್ನು ಮೂರು ದಿನಗಳಲ್ಲಿ ಆಸ್ಪತ್ರೆಗಳೆಲ್ಲವೂ ಶೇ. 100ರಷ್ಟು ತುಂಬಿಹೋಗಲಿವೆ ಎಂದೂ ಸಮಿತಿ ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. 

ಕೋವಿಡ್‌ 19 ವಿರುದ್ಧ ಹೋರಾಡಲು ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ದೆಹಲಿ ಸರ್ಕಾರ ಸಮಿತಿಯನ್ನು ರಚಿಸಿತ್ತು. 

ಸಮಿತಿ ನೀಡಿರುವ ಶಿಫಾರಸುಗಳ ಕುರಿತು ಚರ್ಚಿಸಲು ನಾಳೆಯೇ ಕ್ಯಾಬಿನೆಟ್‌ ಸಭೆ ಕರೆಯಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು