ಶುಕ್ರವಾರ, ಏಪ್ರಿಲ್ 3, 2020
19 °C

ಆತಂಕದಲ್ಲಿ ಜಾಫರಾಬಾದ್‌ ನಿವಾಸಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಇಲ್ಲಿನ ಜಾಫರಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಲ್ಲಿ ಈಗ ಆತಂಕ–ಭಯ ಮನೆ ಮಾಡಿದೆ. ಈಶಾನ್ಯ ದೆಹಲಿಯಲ್ಲಿ ಆರಂಭಗೊಂಡ ಘರ್ಷಣೆ ಕ್ರಮೇಣ ಇತರೆಡೆಯೂ ಹಬ್ಬಿದ್ದೇ ಈ ಮಹಿಳೆಯರ ಆತಂಕಕ್ಕೆ ಕಾರಣವಾಗಿದೆ.

ವಿವಾದಿತ ಸಿಎಎ ಅನ್ನು ಹಿಂಪಡೆಯದ ಹೊರತು ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದ ಮಹಿಳೆಯರಲ್ಲಿ ಹೋರಾಟದ ಕಿಚ್ಚು ಕ್ರಮೇಣ ಕಡಿಮೆಯಾದಂತೆ ಕಂಡು ಬರುತ್ತಿದೆ. ನೆರೆಯ ಪ್ರದೇಶಗಳಾದ ಮೌಜ್‌ಪುರ, ಚಾಂದ್‌ಬಾಗ್‌, ಗೋಕುಲ್‌ಪುರಿ ಮತ್ತು ಭಜನ್‌ಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ಸಾವು–ನೋವಿನಿಂದ ಭಯಭೀತರಾಗಿರುವ ಇಲ್ಲಿನ ಮಹಿಳೆಯರು, ‘ಎಲ್ಲಿಯ ವರೆಗೆ ಒಬ್ಬ ವ್ಯಕ್ತಿ ಯಾತನೆಯನ್ನು ಸಹಿಸಿಕೊಂಡು ಇರಲು ಸಾಧ್ಯ’ ಎಂದು ಹತಾಶೆ–ಆಕ್ರೋಶದಿಂದ ಪ್ರಶ್ನೆಸುತ್ತಾರೆ.

‘ನಮ್ಮ ಹೋರಾಟವೇನಿದ್ದರೂ ಸಿಎಎಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ. ಈ ಹೋರಾಟ ಯಾವುದೇ ಒಂದು ಸಮುದಾಯದ ವಿರುದ್ಧ ಅಲ್ಲ’ ಎಂದೂ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು