ವಿನಾಶದೆಡೆಗೆ ದೇಸಿ ಹಸು ಸಂತತಿ: ವರದಿ ಕೇಳಿದ ಎನ್‌ಜಿಟಿ

7
ಗಣತಿ ನಡೆಸಲು ಸೂಚನೆ

ವಿನಾಶದೆಡೆಗೆ ದೇಸಿ ಹಸು ಸಂತತಿ: ವರದಿ ಕೇಳಿದ ಎನ್‌ಜಿಟಿ

Published:
Updated:

ನವದೆಹಲಿ: ಭಾರತದಲ್ಲಿ ದೇಸಿ ತಳಿಯ ಹಸುಗಳ ಸಂತತಿ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಸಿರು ನ್ಯಾಯಪೀಠ, ಈ ಬಗ್ಗೆ ವರದಿ ಸಲ್ಲಿಸುವಂತೆ ಸೋಮವಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ದೇಸಿ ಹಸುಗಳ ಸಂರಕ್ಷಣೆಗೆ ಕೈಗೊಂಡ ಕ್ರಮ ಮತ್ತು ಅನುಸರಿಸುತ್ತಿರುವ ನೀತಿಗಳ ಕುರಿತು ಮಾಹಿತಿ ನೀಡುವಂತೆ ತಾಕೀತು ಮಾಡಿದೆ.

ಐದು ವರ್ಷಗಳಲ್ಲಿ ಸಂತತಿ ಕುಸಿಯಲು ಕಾರಣ ಏನು ಎಂದು ಪ್ರಶ್ನಿಸಿರುವ ನ್ಯಾಯಮೂರ್ತಿ ಜಾವದ್‌ ರಹಿಮ್‌ ನೇತೃತ್ವದ ಪೀಠ, ದೇಸಿ ಹಸುಗಳ ಗಣತಿ ನಡೆಸುವಂತೆ ಸೂಚಿಸಿದೆ.

ಹಸುಗಳ ಹತ್ಯೆ ತಡೆಯಲು ರಾಜ್ಯಗಳು ಸ್ಥಳೀಯವಾಗಿ ಯಾವುದಾದರೂ ನೀತಿ ಅನುಸರಿಸುತ್ತಿದ್ದರೆ ಅದನ್ನು ಗಮನಕ್ಕೆ ತರುವಂತೆ ನ್ಯಾಯಪೀಠ ಕೋರಿದೆ.

ಯುರೋಪ್‌, ಆಸ್ಟ್ರೇಲಿಯಾ ಮತ್ತು ಅಮೆರಿಕದ ಹಸುಗಳಿಂದಾಗಿ ದೇಸಿ ಹಸುಗಳ ಸಂತತಿ ನಶಿಸುತ್ತಿದೆ ಎಂದು ವಕೀಲ ಅಶ್ವಿನಿ ಕುಮಾರ್‌ ಎಂಬುವರು ನ್ಯಾಯಪೀಠದ ಮೊರೆ ಹೋಗಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !