ದೇವೇಗೌಡರಿಂದ ವಾಸ್ತು ಹೋಮ

7
ಅಧಿಕೃತ ನಿವಾಸಕ್ಕೆ ಮರಳಿದ ಮಾಜಿ ಪ್ರಧಾನಿ

ದೇವೇಗೌಡರಿಂದ ವಾಸ್ತು ಹೋಮ

Published:
Updated:

ನವದೆಹಲಿ: ವಾಸ್ತು ತಜ್ಞರ ಸಲಹೆಯ ಮೇರೆಗೆ ನವೀಕರಣಗೊಂಡ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಶುಕ್ರವಾರ ತೆರಳಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಸಂಬಂಧಿಕರೊಂದಿಗೆ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ನೆರವೇರಿಸಿದರು.

10 ತಿಂಗಳಿಂದ ಸರ್ಕಾರಿ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದ್ದುದರಿಂದ, ಕರ್ನಾಟಕ ಭವನದಲ್ಲೇ ದೇವೇಗೌಡರು ವಾಸ್ತವ್ಯ ಹೂಡಿದ್ದರು.

ಬಂಗಲೆಯ ಮುಖ್ಯ ಬಾಗಿಲು, ದೇವರ ಮನೆ, ಅಡುಗೆ ಮನೆ, ಮಲಗುವ ಕೊಠಡಿ, ಅತಿಥಿಗಳ ಕೊಠಡಿ ಸೇರಿದಂತೆ ಬಹುತೇಕ ಕೊಠಡಿಗಳ ಬಾಗಿಲು, ಕಿಟಕಿಗಳನ್ನು ಬೇರೆಡೆ ಜೋಡಿಸುವಂತೆ ವಾಸ್ತುತಜ್ಞರು ಸೂಚಿಸಿದ್ದರಿಂದ ನವೀಕರಣ ಮಾಡಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !