7
ಮಕ್ಕಳ ಕಳ್ಳರೆಂಬ ಶಂಕೆಗೆ ಐವರ ಬಲಿ

ಧುಳೆ ಹತ್ಯೆ: ವದಂತಿ ಹಿಂದೆ ಬೆಂಗಳೂರಿನ ವಿಡಿಯೊ

Published:
Updated:

ಮುಂಬೈ: ‘ಮಹಾರಾಷ್ಟ್ರದ ಧುಳೆಯಲ್ಲಿ ಈಚೆಗೆ ಐವರು ಅಮಾಯಕರ ಹತ್ಯೆಗೆ ಕಾರಣವಾದ ಮಕ್ಕಳ ಕಳ್ಳರ ವಂದತಿಯನ್ನು ಹಬ್ಬಿಸಲು ಬೆಂಗಳೂರಿನ ಸಿ.ಸಿ.ಟಿ.ವಿ. ಕ್ಯಾಮೆರಾ ಒಂದರ ವಿಡಿಯೊವನ್ನೂ ಬಳಸಿಕೊಳ್ಳಲಾಗಿದೆ’ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬೆಂಗಳೂರಿನ ಬೀದಿಯೊಂದರಲ್ಲಿ ಬುರ್ಖಾಧಾರಿ ಮಹಿಳೆಯೊಬ್ಬರು ನಡೆದುಹೋಗುವ ದೃಶ್ಯ ಆ ವಿಡಿಯೊದಲ್ಲಿದೆ. ಆ ಮಹಿಳೆ ಮಕ್ಕಳ ಕಳ್ಳಿಯೇ ಅಥವಾ ಇಲ್ಲವೇ ಎಂಬುದು ಆ ವಿಡಿಯೊದಿಂದ ಸ್ಪಷ್ಟವಾಗುವುದಿಲ್ಲ. ಆದರೆ ‘ಧುಳೆಯಲ್ಲಿ ಮಕ್ಕಳ ಕಳ್ಳಿ’ ಎಂಬ ವಿವರದೊಂದಿಗೆ ಆ ವಿಡಿಯೊವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ’ ಎಂದು ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಬಿಪಿನ್ ಬಿಹಾರಿ ಹೇಳಿದ್ದಾರೆ.

‘ಧುಳೆಯಲ್ಲಿ ಮಕ್ಕಳ ಕಳ್ಳರ ವದಂತಿ ಹಬ್ಬಿಸಲು ಐದು ವಿಡಿಯೊಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಆ ಎಲ್ಲಾ ವಿಡಿಯೊಗಳನ್ನು ತಿರುಚಲಾಗಿದೆ. ಅವುಗಳ ದೃಶ್ಯಗಳನ್ನು ಕತ್ತರಿಸಲಾಗಿದೆ, ಧ್ವನಿ, ಸ್ಥಳ ಮತ್ತು ಸಮಯದ ವಿವರಗಳನ್ನು ಬದಲಿಸಲಾಗಿದೆ. ಧುಳೆ ಹತ್ಯೆಯ 27 ಆರೋಪಿಗಳೂ ಈ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

* ಜನರಲ್ಲಿ ಗಾಬರಿ ಹುಟ್ಟಿಸುವ ಉದ್ದೇಶದಿಂದ ವಿಡಿಯೊ ಗಳನ್ನು ತಿರುಚಿ, ವದಂತಿ ಹಬ್ಬಿಸಲಾಗು ತ್ತಿದೆ. ಇದನ್ನೆಲ್ಲಾ ಮಾಡುತ್ತಿರುವವರ ಪತ್ತೆಗೆ ತಂಡ ರಚಿಸಲಾಗಿದೆ

–ಬಿಪಿನ್ ಬಿಹಾರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಮಹಾರಾಷ್ಟ್ರ

ಮುಖ್ಯಾಂಶಗಳು

* ವಿಡಿಯೊಗಳ ಸ್ಥಳ–ಸಮಯ ವಿವರ ತಿರುಚಿ ವದಂತಿ ಹಬ್ಬಿಸಲಾಗಿದೆ: ಪೊಲೀಸ್

* ಧುಳೆ ಹತ್ಯೆ ಆರೋಪಿಗಳು ಈ ವಿಡಿಯೊಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ

* ಇದನ್ನೂ ಓದಿ... 

ತಿರುಚಿದ ವಿಡಿಯೊಗಳಿಗೆ ಅಮಾಯಕರು ಬಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !