ಎರಡು ತಿಂಗಳಿಗೆ ಮಾತ್ರ ಪ್ರಿಯಾಂಕಾಳನ್ನು ಉತ್ತರಪ್ರದೇಶಕ್ಕೆ ಕಳುಹಿಸಿಲ್ಲ: ರಾಹುಲ್

7

ಎರಡು ತಿಂಗಳಿಗೆ ಮಾತ್ರ ಪ್ರಿಯಾಂಕಾಳನ್ನು ಉತ್ತರಪ್ರದೇಶಕ್ಕೆ ಕಳುಹಿಸಿಲ್ಲ: ರಾಹುಲ್

Published:
Updated:

ನವದೆಹಲಿ: ಉತ್ತರ ಪ್ರದೇಶದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದೆ. ಹಾಗಾಗಿ ಬಿಜೆಪಿಗೆ ಸ್ವಲ್ಪ ಭಯ ಹುಟ್ಟಿದೆ ಎಂದು ಅಮೇಥಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.

ಬುಧವಾರ ಪ್ರಿಯಾಂಕಾ ಗಾಂಧಿ ಅವರನ್ನು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯನ್ನು ತಮ್ಮ ಸಹೋದರಿಗೆ ನೀಡಿದ್ದಾರೆ.

ಏತನ್ಮಧ್ಯೆ, ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದಾರೆಯೇ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಅದು ಪ್ರಿಯಾಂಕಾ ಅವರಿಗೆ ಬಿಟ್ಟದ್ದು. ಅದು ಉತ್ತರ ಪ್ರದೇಶ, ಗುಜರಾತ್ ಅಥವಾ ಇನ್ನು ಯಾವುದೇ ರಾಜ್ಯವಾಗಿರಲಿ. ನಾವು ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ರಾಹುಲ್.

ಪ್ರಿಯಾಂಕಾ ಜತೆ ಕೆಲಸ ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ ರಾಹುಲ್, ನನ್ನ ಸಹೋದರಿ ಶ್ರಮಜೀವಿ, ಜ್ಯೋತಿರಾದಿತ್ಯ ಕೂಡಾ ತುಂಬಾ ಉತ್ತಮ ನಾಯಕ ಎಂದಿದ್ದಾರೆ.

ಉತ್ತರ ಪ್ರದೇಶವನ್ನು ಬಿಜೆಪಿ ನಿರ್ನಾಮ ಮಾಡಿದೆ. ನಾವು ಇಲ್ಲಿನ ಜನರಿಗೆ ಹೊಸ ದಿಶೆ ತೋರಿಸಲಿದ್ದೇವೆ. ಈ ಎರಡು ನಾಯಕರ ನೇತೃತ್ವದಲ್ಲಿ ನಾವು ಉತ್ತರ ಪ್ರದೇಶವನ್ನು ನಂಬರ್ 1 ಮಾಡಲು  ಬಯಸುತ್ತೇನೆ.

ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಅವರನ್ನು ಕೇವಲ ಎರಡು ತಿಂಗಳ ಮಟ್ಟಿಗೆ ನಾನು ಉತ್ತರ ಪ್ರದೇಶಕ್ಕೆ ಕಳುಹಿಸಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ್ನು ಮುನ್ನಡೆಸುವುದಕ್ಕಾಗಿ ಅವರನ್ನು ಅಲ್ಲಿಗೆ ಕಳುಹಿಸಿದ್ದೇನೆ.  ಬಡವರ, ಯುವಜನರ ಮತ್ತು ರೈತರ ಪರವಾಗಿ ನಾವು ನಿಲ್ಲುತ್ತೇವೆ. ಉತ್ತರಪ್ರದೇಶ ಹೊಸ ಧೋರಣೆ, ಹೊಸ ಯೋಚನೆಗೆ ತೆರೆದುಕೊಳ್ಳಲಿದೆ ಎಂದಿದ್ದಾರೆ ರಾಹುಲ್.
 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !