ಎದೆ ಸೋಂಕು: ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

7

ಎದೆ ಸೋಂಕು: ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

Published:
Updated:
Deccan Herald

ಮುಂಬೈ: ಎದೆಯ ಸೋಂಕಿನಿಂದ ಬಳಲುತ್ತಿರುವ ನಟ ದಿಲೀಪ್ ಕುಮಾರ್ (95) ಅವರನ್ನು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.

‘ಮೊದಲಿನಿಂದಲೂ ಈ ಆಸ್ಪತ್ರೆಯಲ್ಲೇ ನಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಅಗತ್ಯ ಪರೀಕ್ಷೆಗಳಿಗಾಗಿ ಅವರು ಮತ್ತಷ್ಟು ದಿನ ಇಲ್ಲೇ ಇರಬೇಕಾಗುತ್ತದೆ.‌ ನಿತಿನ್ ಗೋಖಲೆ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ’ ಎಂದು ಬಾನು ತಿಳಿಸಿದ್ದಾರೆ.

‘ಆತಂಕ ಪಡುವ ಅಗತ್ಯವಿಲ್ಲ. ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ದಿಲೀಪ್‌ ಅನಾರೋಗ್ಯದ ವಿಚಾರವನ್ನು ಅವರ ಸಂಬಂಧಿ ಫೈಸಲ್ ಫಾರೂಕಿ ಮೊದಲು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 1

    Frustrated
  • 0

    Angry

Comments:

0 comments

Write the first review for this !