ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾರದ ಸ್ವಾಗತ

Last Updated 20 ನವೆಂಬರ್ 2018, 12:08 IST
ಅಕ್ಷರ ಗಾತ್ರ

ಭೋಪಾಲ್‌:ಮಧ್ಯಪ್ರದೇಶದ ವಿಧಾನಸಭೆ ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ದಿಲೀಪ್‌ ಶೇಖಾವತ್‌ ಅವರಿಗೆ ವ್ಯಕ್ತಿಯೊಬ್ಬರು ಸೋಮವಾರ ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ.ಈ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನಾಗಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶೇಖಾವತ್‌ ಅವರು ಮುಂದೆ ನಡೆಯಲಿರುವ ಚುನಾವಣೆಗಾಗಿ ಪ್ರಚಾರ ಕೈಗೊಂಡಿದ್ದರು. ಈ ಘಟನೆಯ ವಿಡಿಯೊ ಸಾಮಾಜೀಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಶೇಖಾವತ್‌ ಅವರಿಗೆ ವ್ಯಕ್ತಿ ಶೂ, ಚಪ್ಪಲಿಗಳ ಹಾರ ಹಾಕಿದ್ದಾನೆ. ಈ ಘಟನೆಯಿಂದ ಕಕ್ಕಾಬಿಕ್ಕಿಯಾದ ಶೇಖಾವತ್‌ ಅವರು ತಕ್ಷಣ ಅದನ್ನು ತೆಗೆದೊಗೆದು, ಆ ವ್ಯಕ್ತಿಗೆ ಹೊಡೆದಿರುವುದು ವಿಡಿಯೊದಲ್ಲಿದೆ. ವಿಡಿಯೊವನ್ನು ಎಎನ್‌ಐ ಟ್ವಿಟ್‌ ಮಾಡಿದೆ.

ವಿಧಾನಸಭೆಯ 230 ಸ್ಥಾನಗಳಿಗೆ ನ.28ರಂದು ಚುನಾವಣೆ ನಡೆಯಲಿದೆ. ಡಿ.11ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಈ ಹಿಂದೆ ಇತಹದ್ದೇ ಘಟನೆ ಜನವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಧಾರ್‌ ಧಮನಾಡ್‌ ಎಂಬುವರಿಗೆ ಶೂಗಳ ಹಾರವನ್ನು ಹಾಕಿ ಸ್ವಾಗತಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT