ಸೋಮವಾರ, ನವೆಂಬರ್ 18, 2019
25 °C

ಸುಪ್ರೀಂ ಕೋರ್ಟ್: ನವೆಂಬರ್ 13ಕ್ಕೆ ಅನರ್ಹ ಶಾಸಕರ ಅರ್ಜಿಯ ತೀರ್ಪು ಪ್ರಕಟ

Published:
Updated:

ನವದೆಹಲಿ: ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ಪ್ರಕಟಿಸಲು ಸುಪ್ರೀಂ ಕೋರ್ಟ್ ನವೆಂಬರ್ 13ಕ್ಕೆ ದಿನಾಂಕ ನಿಗದಿ ಮಾಡಿದೆ.

ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಪ್ರಕಟಣೆಗಾಗಿ ಸುಪ್ರೀಂ ಕೋರ್ಟ್‌‌ನ ಪಟ್ಟಿಯಲ್ಲಿ ಪ್ರಕರಣ ಸಂಖ್ಯೆ ಹಾಗೂ ವಾದಿ ಪ್ರತಿವಾದಿಗಳ ಹೆಸರನ್ನು ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಅನರ್ಹ ಶಾಸಕರ ಅರ್ಜಿ ಕುರಿತು ಈಗಾಗಲೇ ವಾದ ಪ್ರತಿವಾದ ಮುಗಿದಿದ್ದು, ತೀರ್ಪು ಪ್ರಕಟಣೆ ಮಾತ್ರ ಬಾಕಿ ಇದೆ. ತೀರ್ಪು ಪ್ರಕಟಣೆಗಾಗಿ ಕರ್ನಾಟಕದ ಅನರ್ಹ ಶಾಸಕರು ಕಾದಿದ್ದು, ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದೆ. ರಾಜಕೀಯವಾಗಿಯೂ ಇದು ಅತ್ಯಂತ ಮಹತ್ವದ ತೀರ್ಪು ಎನಿಸಿಕೊಳ್ಳಲಿದೆ.

 

ಪ್ರತಿಕ್ರಿಯಿಸಿ (+)