ಗುರುವಾರ , ನವೆಂಬರ್ 21, 2019
26 °C

ಜ್ವರ: ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲು

Published:
Updated:
Prajavani

ನವದೆಹಲಿ: ಜಾರಿ ನಿರ್ದೇಶನಾಯದ ವಶದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಶನಿವಾರ ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ಸಂದರ್ಭ ಶಿವಕುಮಾರ್‌ ಅವರ ರಕ್ತದ ಒತ್ತಡದಲ್ಲಿ ಏರುಪೇರು ಕಂಡು ಬಂದಿದ್ದಲ್ಲದೆ, ಜ್ವರದಿಂದ ಬಳಲುತ್ತಿದ್ದರು. ಈಕಾರಣ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಸಲಹೆಯ ಮೇರೆಗೆ ದಾಖಲು ಮಾಡಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಡಿಕೆಶಿ ಕಸ್ಟಡಿ ಅವಧಿ ವಿಸ್ತರಣೆ: ಸೆ.17ರಂದು ಜಾಮೀನು ಅರ್ಜಿ ವಿಚಾರಣೆ

ಪ್ರತಿಕ್ರಿಯಿಸಿ (+)