ಮಾಜಿ ಕಾರ್ಪೊರೇಟರ್ ಯುವತಿಯನ್ನು ಥಳಿಸುವ ವಿಡಿಯೊ ವೈರಲ್ ಆಯ್ತು...

7

ಮಾಜಿ ಕಾರ್ಪೊರೇಟರ್ ಯುವತಿಯನ್ನು ಥಳಿಸುವ ವಿಡಿಯೊ ವೈರಲ್ ಆಯ್ತು...

Published:
Updated:

ಚೆನ್ನೈ: ಡಿಎಂಕೆ ಪಕ್ಷದ ಮಾಜಿ ಕಾರ್ಪೊರೇಟರ್ ಸೆಲ್ವಕುಮಾರ್‌ ಬ್ಯೂಟಿ ಪಾರ್ಲರ್‌ನಲ್ಲಿ ಯುವತಿಯೊಬ್ಬರಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪೆರಂಬಲೂರಿನಲ್ಲಿರುವ ಬ್ಯೂಟಿ ಪಾರ್ಲರ್‌ವೊಂದರಲ್ಲಿ  ಮೇ ತಿಂಗಳ 25ರಂದು ಈ ಘಟನೆ ನಡೆದಿದೆ. ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸುವಾಗ ಆಕೆಯ ಗೆಳತಿಯರು ಸಹಾಯಕ್ಕೆ ಬಂದು ಹೊಡೆಯುವುದು ಬೇಡ ಎಂದು ಮನವಿ ಮಾಡಿದರೂ ಸೆಲ್ವಕುಮಾರ್ ಕಾಲಿನಿಂದ ಯುವತಿಯನ್ನು ಥಳಿಸುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಪೊಲೀಸರು ಸೆಲ್ವಕುಮಾರನನ್ನು ಬಂಧಿಸಿದ್ದಾರೆ.  ಡಿಎಂಕೆ ಪಕ್ಷ ಸೆಲ್ವಕುಮಾರನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.

ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 2

  Sad
 • 2

  Frustrated
 • 27

  Angry

Comments:

0 comments

Write the first review for this !