ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ನಾಯಿ ಉದ್ಯಾನ ಲೋಕಾರ್ಪಣೆ

Last Updated 19 ಅಕ್ಟೋಬರ್ 2018, 16:50 IST
ಅಕ್ಷರ ಗಾತ್ರ

ಹೈದರಾಬಾದ್:ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ ಇಲ್ಲಿನ ಕೊಂಡಾಪುರ್‌ ಪ್ರದೇಶದಲ್ಲಿ ಉದ್ಘಾಟನೆಯಾಗಿದೆ. 1.3 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರ ನಾಯಿಗಳಿಗೆ ಅನುಕೂಲವಾದ ನಡಿಗೆಪಥ, ವಿಹಾರಕ್ಕೆ ಅನುಕೂಲವಾದ ಜಾಗ, ಕ್ಲಿನಿಕ್‌ ಸಹ ಒಳಗೊಂಡಿದೆ.

ಈ ಉದ್ಯಾನವನ್ನು ತೆಲಂಗಾಣ ಮುಖ್ಯ ಕಾರ್ಯದರ್ಶಿ ಎಸ್.ಕೆ. ಜೋಶಿ ಉದ್ಘಾಟಿಸಿದರು. ‘₹1 ಕೋಟಿವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನದಲ್ಲಿ ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ, ಆರೋಗ್ಯ ತಪಾಸಣೆ ಮಾಡಲಾಗುತ್ತೆ. ಜತೆಗೆ ವ್ಯದ್ಯರು ಹಾಗೂ ತರಬೇತುದಾರರನ್ನು ನೇಮಕ ಮಾಡಲಾಗುವುದು’ ಎಂದು ಹೈದರಾಬಾದ್ ಪುರಸಭೆಯ ವಲಯ ಆಯುಕ್ತ ಹರಿಚಂದನ ತಿಳಿಸಿದರು.

‘ನಾಯಿಗಳಿಗೆ ತರಬೇತಿ ಮತ್ತು ವ್ಯಾಯಾಮಕ್ಕೆ ಅನುಕೂಲವಾದ ಉಪಕರಣ, ಈಜುಕೊಳ, ಎರಡು ಹುಲ್ಲುಗಾವಲು ಪ್ರದೇಶ, ವರ್ತುಲ ಕ್ರೀಡಾಂಗಣ, ಆಟೋಟ ಕೇಂದ್ರಗಳು ಇದರಲ್ಲಿವೆ. ದೊಡ್ಡ ಮತ್ತು ಚಿಕ್ಕದಾದ ನಾಯಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಕಳೆದ ಒಂದು ವರ್ಷದಿಂದ ಈ ಉದ್ಯಾನ ನಿರ್ಮಾಣವಾಗುತ್ತಿದ್ದು, ವಾಸ್ತುಶಿಲ್ಪ ಹಾಗೂ ಶ್ವಾನಪ್ರೇಮಿಗಳ ಸಲಹೆ ಮೇರೆಗೆ ಆಧುನಿಕ ಉಪಕರಣ ಹಾಗೂ ಕೇಂದ್ರದ ವಿನ್ಯಾಸ ಮಾಡಲಾಗಿದೆ.

ಇದರ ಯಶಸ್ಸನ್ನು ಆಧರಿಸಿ, ನಗರದ ಪೂರ್ವಭಾಗದಲ್ಲಿ ಮತ್ತೊಂದು ಉದ್ಯಾನವನ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲು ಜಿಎಚ್‌ಎಂಸಿ ನಿರ್ಧರಿಸಿದೆ.

ನಗರದಲ್ಲಿ 2.5 ಲಕ್ಷ ನಾಯಿ: ಜಿಎಚ್‌ಎಂಸಿ ನಡೆಸಿದ ಸಮೀಕ್ಷೆ ಪ್ರಕಾರ, ಪಶ್ಚಿಮ ವಲಯ ಮತ್ತು ಕೇಂದ್ರ ವಲಯದಲ್ಲಿ 2.5 ಲಕ್ಷ ಮಂದಿ ನಾಯಿಗಳನ್ನು ಸಾಕುತ್ತಿದ್ದಾರೆ. ನಗರದ ಕೇಂದ್ರಭಾಗದಲ್ಲಿ ಉದ್ಯಾನ ಇರುವ ಕಾರಣ ಇಲ್ಲಿಗೆ ನಾಯಿಗಳನ್ನು ಕರೆತರುವುದು ಸುಲಭ. ಉಳಿದಂತೆ ಮಾಮೂಲಿ ಉದ್ಯಾನದಲ್ಲಿ ನಾಯಿಗಳ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT