ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ ವಿಜ್ಞಾನಿ ಎಂದು ಹೇಳಿ ಪಿಎಚ್‌.ಡಿ ವಿದ್ಯಾರ್ಥಿನಿ ಮದುವೆಯಾದ ಯುವಕ

Last Updated 6 ಅಕ್ಟೋಬರ್ 2019, 5:13 IST
ಅಕ್ಷರ ಗಾತ್ರ

ನವದೆಹಲಿ:ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿ ಎಂದು ಸುಳ್ಳು ಹೇಳಿ ಯುವಕನೊಬ್ಬಪಿ.ಎಚ್‌ಡಿ ವಿದ್ಯಾರ್ಥಿನಿಯನ್ನು ಮದುವೆಯಾಗಿ ವಂಚಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿನದ್ವಾರಕ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಜಿತೇಂದ್ರ ಸಿಂಗ್‌ ಎಂದು ಗುರುತಿಸಲಾಗಿದೆ.ಡಿಆರ್‌ಡಿಒದಲ್ಲಿ ನಾನುವಿಜ್ಞಾನಿಯಾಗಿದ್ದು ಮುಂದಿನ ದಿನಗಳಲ್ಲಿ ನಾಸಾ ಸಂಸ್ಥೆ ಸೇರಲಿದ್ದೇನೆ ಎಂದು ಸುಳ್ಳು ಹೇಳಿದ್ದ ಎಂದು ವಂಚನೆಗೆ ಒಳಗಾಗಿರುವ ಸಂತ್ರಸ್ತ ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿರುವ ಯುವತಿಯನ್ನು ಮದುವೆಯಾಗುವ ಸಲುವಾಗಿ ಆರೋಪಿ ಜಿತೇಂದ್ರ ಸಿಂಗ್‌ ಅವರ ಮನೆಗೆ ಪದೇ ಪದೇ ಹೋಗಿ ಬರುತ್ತಿದ್ದ.ಡಿಆರ್‌ಡಿಒದ ನಕಲಿ ದಾಖಲೆ ಮತ್ತು ಐಡಿಯನ್ನು ತಯಾರಿಸಿಕೊಂಡು ಯುವತಿಯ ಕುಟುಂಬದವರು ನಂಬುವಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೀತೇಂದ್ರ ಸಿಂಗ್‌ ಮಾತಿಗೆ ಮರುಳಾಗಿದ್ದ ಯುವತಿಯ ಕುಟುಂಬದವರುಮೂರು ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ನಂತರ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿರುವಾಗಜಿತೇಂದ್ರ ಸಿಂಗ್‌ ನಿಜ ಬಣ್ಣ ಬಯಲಾಗಿದೆ.

ಜಿತೇಂದ್ರ ಈ ಹಿಂದೆ ಒಂದು ಮದುವೆಯಾಗಿ ಪತ್ನಿಯನ್ನು ತೊರೆದಿರುವುದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ದ್ವಾರಕಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT