ಬ್ರಹ್ಮೋಸ್ ರಹಸ್ಯ ಸೋರಿಕೆ? ಡಿಆರ್‌ಡಿಒ ವಿಜ್ಞಾನಿ ಬಂಧನ

7

ಬ್ರಹ್ಮೋಸ್ ರಹಸ್ಯ ಸೋರಿಕೆ? ಡಿಆರ್‌ಡಿಒ ವಿಜ್ಞಾನಿ ಬಂಧನ

Published:
Updated:

ನಾಗಪುರ: ಬೇಹುಗಾರಿಕೆ ಆರೋಪದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿ ನಿಶಾಂತ್ ಅಗರ್‌ವಾಲ್ ಅವರನ್ನು ಸೋಮವಾರ ಬಂಧಿಸಲಾಗಿದೆ.

ಇಲ್ಲಿನ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ನಾಲ್ಕು ವರ್ಷಗಳಿಂದ ಇವರು ಕೆಲಸ ಮಾಡುತ್ತಿದ್ದಾರೆ. ಕ್ಷಿಪಣಿ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇವರನ್ನು ಬಂಧಿಸಿದೆ. 

ಗೋಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಇತರೆ ದೇಶಗಳಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಮಹಿಳೆ ಹೆಸರಲ್ಲಿರುವ ಫೇಸ್‌ಬುಕ್ ಐಡಿ ಜೊತೆ ಸಂವಾದ ನಡೆದಿದ್ದು, ಇವರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ನಿಶಾಂತ್ ಅವರ ಕಂಪ್ಯೂಟರ್‌ನಲ್ಲಿ ಗೋಪ್ಯ ಮಾಹಿತಿ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. 

ವಿಜ್ಞಾನಿಗಳ ಮೇಲೆ ನಿಗಾ: ಅಗರ್‌ವಾಲ್ ಬಂಧನದ ಬೆನ್ನಲ್ಲೇ ಕಾನ್ಪುರದಲ್ಲಿರುವ ಡಿಆರ್‌ಡಿಒ ಪ್ರಯೋಗಾಲಯ ಇಬ್ಬರು ವಿಜ್ಞಾನಿಗಳ ನಡೆ ಅನುಮಾನ ಮೂಡಿಸಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

‘ಬ್ರಹ್ಮೋಸ್’ ವಿಶೇಷತೆ: ಬ್ರಹ್ಮೋಸ್, ವಿಶ್ವದ ಅತಿವೇಗದ ಕ್ರೂಸ್ ಮಿಸೈಲ್ ಎನಿಸಿಕೊಂಡಿದೆ. ಭೂಮಿಯ ಮೇಲ್ಮೈ, ನೌಕೆ, ವಿಮಾನ ಹಾಗೂ ಜಲಾಂತರ್ಗಾಮಿ ಮೇಲಿನಿಂದ ಇದನ್ನು ಉಡ್ಡಯನ ಮಾಡಬಹುದು. ಭಾರತ ಹಾಗೂ ರಷ್ಯಾ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. 600 ಕಿ.ಮೀ ವ್ಯಾಪ್ತಿಯ ಹೊಸ ತಲೆಮಾರಿನ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಗೆ ಉಭಯ ದೇಶಗಳು ಯೋಜನೆ ರೂಪಿಸಿವೆ. 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !