ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಕ್ರಿಕೆಟ್: ವಿಶ್ವಾಸ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಲಾಸ್‌ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಐಸಿಸಿಯಲ್ಲಿರುವ 104 ಸದಸ್ಯರಿಗೆ ಟ್ವೆಂಟಿ–20 ಕ್ರಿಕೆಟ್ ಆಡಲು ಮಾನ್ಯತೆ ನೀಡಲಾಗಿದೆ. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಹಾದಿ ಸುಗಮವಾಗಲಿದೆ. ಶೀಘ್ರದಲ್ಲಿಯೇ ಐಒಸಿಯ (ಅಂತರರಾಷ್ಟ್ರೀಯ ಒಲಿಂ ಪಿಕ್ಸ್‌ ಸಮಿತಿ) ಮುಖ್ಯಸ್ಥರಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

‘2024ರ ಒಲಿಂಪಿಕ್ಸ್‌ಗೆ ಸೇರ್ಪಡೆ ಮಾಡುವಂತೆ ಪ್ರಸ್ತಾವ ಸಲ್ಲಿಸುವ ಸಮಯ ಮುಗಿದು ಹೋಗಿದೆ. ಆದ್ದರಿಂದ 2028ರ ಕೂಟದಲ್ಲಿ ಅವಕಾಶ ನೀಡಲು ಕೋರುತ್ತೇವೆ. ಕ್ರಿಕೆಟ್ ಆಟವನ್ನು ಜಾಗತೀಕರಣಗೊಳಿಸಲು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು. ಬಹಳಷ್ಟು ದೇಶಗಳು ಆಸಕ್ತಿ ತೋರಿಸುತ್ತಿವೆ’ ಎಂದು ರಿಚರ್ಡ್ಸನ್ ಹೇಳಿದರು.

1900ನೇ ಇಸವಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಆಡಿಸಲಾಗಿತ್ತು.

ಬಿಸಿಸಿಐ ನಿರಾಸಕ್ತಿ: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೆಚ್ಚು ಆಸಕ್ತಿ ತೋರಿಲ್ಲ.

‘ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರಿದರೆ ಬಿಸಿಸಿಐ ಭಾರತ ಒಲಿಂಪಿಕ್ಸ್‌ ಸಂಸ್ಥೆಯ (ಐಒಎ) ಅಧೀನಕ್ಕೆ ಒಳಪಡಬೇಕಾಗುತ್ತದೆ. ಅದರಿಂದಾಗಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಿಚರ್ಡ್ಸನ್, ‘ಬಿಸಿಸಿಐ ಮತ್ತು ಐಒಎ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಾಗಿದೆ. ಕ್ರಿಕೆಟ್‌ ಸೇರ್ಪಡೆ ಮಾಡುವ ಮೂಲಕ ಒಲಿಂಪಿಕ್ಸ್‌ ಕೂಟದ ಘನತೆ ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕಾದ ಅವಶ್ಯಕತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT