ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಸೋರಿಕೆ ಶಂಕೆ: 6 ಗಂಟೆ ತಡವಾಗಿ ತಲುಪಿದ ಮುಂಬೈ-ಸಿಂಗಪುರ್ ಇಂಡಿಗೊ ವಿಮಾನ

Last Updated 2 ಜನವರಿ 2020, 9:27 IST
ಅಕ್ಷರ ಗಾತ್ರ

ನವದೆಹಲಿ:ಮುಂಬೈಯಿಂದ ಸಿಂಗಪುರ್‌ಗೆ ಪ್ರಯಾಣಿಸುತ್ತಿದ್ದಇಂಡಿಗೊ ವಿಮಾನದಲ್ಲಿ ತೈಲ ಸೋರಿಕೆ ಕಂಡು ಬಂದ ಕೂಡಲೇ ವಿಮಾನ ನಾಗ್ಪುರದತ್ತ ಪಯಣ ಬೆಳೆಸಿತ್ತು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

6ಇ- 19 ಇಂಡಿಗೊ ವಿಮಾನ ಮುಂಬೈಯಿಂದ ರಾತ್ರಿ 01.52ಕ್ಕೆ ಹೊರಟಿದ್ದಮುಂಜಾನೆ 4.12ಕ್ಕೆ ಶಾಂಘೈ ವಿಮಾನ ನಿಲ್ದಾಣಕ್ಕೆತಲುಪಿತ್ತು. ಅಂದರೆ ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿ ವಿಮಾನ ಸಿಂಗಪುರ್ ತಲುಪಿದೆ.

ಪ್ರಸ್ತುತ ಘಟನೆ ಬಗ್ಗೆಪ್ರತಿಕ್ರಿಯಿಸಿದ ಇಂಡಿಗೊ ಸಂಸ್ಥೆ, 6ಇ-19 ವಿಮಾನದಲ್ಲಿ ಅನಿಲ ಸೋರಿಕೆ ಶಂಕೆ ವ್ಯಕ್ತವಾಗಿದ್ದರಿಂದ ಮುಂಬೈಯಿಂದ ಸಿಂಗಪುರ್ ಹೊರಟ ವಿಮಾನವನ್ನು ನಾಗ್ಪುರದತ್ತ ದಿಶೆ ಬದಲಿಸಬೇಕಾಗಿ ಬಂತು. ಆ ವಿಮಾನವನ್ನು ತಾಂತ್ರಿಕ ಪರೀಕ್ಷೆಗೊಳಪಡಿಸಲಾಗಿದೆ. ನಾಗ್ಪುರದಿಂದ ಬೇರೆ ವಿಮಾನದ ಮೂಲಕ ಪ್ರಯಾಣಿಕರನ್ನು ಸಿಂಗಪುರ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT