ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವು

Last Updated 10 ಏಪ್ರಿಲ್ 2019, 12:40 IST
ಅಕ್ಷರ ಗಾತ್ರ

ನಾರಾಯಣ್‌ಪೇಟೆ: ತೆಲಂಗಾಣದ ನಾರಾಯಣ್ ಪೇಟೆಯಲ್ಲಿ ಮಣ್ಣಿನ ದಿಬ್ಬ ಕುಸಿದು 10ಮಹಿಳಾ ಕಾರ್ಮಿಕರು ಸಾವಿಗೀಡಾಗಿದ್ದಾರೆ.ಇಲ್ಲಿನ ಮರಿಕಲ್ ಬ್ಲಾಕ್‌ನ ತಿಲೆರು ಗ್ರಾಮದಲ್ಲಿಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ (ಮನರೇಗಾ) ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ ಇವರು.

ತಿಲೆರು ಗ್ರಾಮದ ಇಡ್ಮರ್ತಿಪ್ಪದಲ್ಲಿ ದಿಬ್ಬವನ್ನು ಅಗೆಯುವ ಕಾರ್ಯದಲ್ಲಿ ನಿರತರಾಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.ದಿಬ್ಬ ಕುಸಿದು ಬಿದ್ದಾಗ ಅಲ್ಲಿದ್ದವರಿಗೆ ಓಡಲು ಸಾಧ್ಯವಾಗದೆ 10 ಮಂದಿ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಮರಿಕಲ್ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಗ್ರಾಮದ ಜನರ ಸಹಾಯದಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಘಟನೆ ವೇಳೆ 5 ಮಂದಿ ಕಾರ್ಮಿಕರು ಪಾರಾಗಿದ್ದು, ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರ ದುರ್ಮರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT