ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನ ಬೆಂಬಲ ಕಾರಣ: ಇಶಾನ್‌ ಕಿಶನ್‌

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನನ್ನ ಉತ್ತಮ ಬ್ಯಾಟಿಂಗ್‌ಗೆ ನಾಯಕ ರೋಹಿತ್‌ ಶರ್ಮಾ ಅವರು ನೀಡಿದ ಬೆಂಬಲ ಕಾರಣ’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸಮನ್‌ ಇಶಾನ್‌ ಕಿಶನ್‌ ಹೇಳಿದರು.

ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ವಿರುದ್ಧದ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಕೆಕೆಆರ್‌ ವಿರುದ್ಧ 102 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 210 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಕೆಕೆಆರ್‌, 18.1 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟಾಯಿತು. ಮುಂಬೈ ಪರವಾಗಿ ಇಶಾನ್‌ ಕಿಶನ್‌ ಅವರು ಕೇವಲ 21 ಎಸೆತಗಳಲ್ಲಿ 62 ರನ್‌ ಗಳಿಸಿದರು. ಅವರ ಅಬ್ಬರದ ಬ್ಯಾಟಿಂಗ್‌ನಲ್ಲಿ 6 ಸಿಕ್ಸರ್‌ ಹಾಗೂ 5 ಬೌಂಡರಿಗಳಿದ್ದವು.

‘ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಟವಾಡು. ಅದರಿಂದ ಉತ್ತಮ ಇನ್ನಿಂಗ್ಸ್‌ ಕಟ್ಟುವ ಆತ್ಮವಿಶ್ವಾಸ ಮೂಡುತ್ತದೆ. ನಾಯಕ ಹಾಗೂ ತಂಡದ ಸಹ ಆಟಗಾರರು ಇಂತಹ ಬೆಂಬಲ ನೀಡಿದ್ದರಿಂದ ಕೆಕೆಆರ್ ವಿರುದ್ಧ ಉತ್ತಮವಾಗಿ ಆಟವಾಡಲು ಸಾಧ್ಯವಾಯಿತು’ ಎಂದು ಇಶಾನ್‌ ಹೇಳಿದರು.

‘ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರೆ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಬಹುದು. ಆಗ ಮಾತ್ರ ಎಂತಹ ಬೌಲರ್‌ಗಳ ಸವಾಲನ್ನೂ ಮೀರಬಹುದು ಎಂದು ತಂಡದ ಕೋಚ್‌ ಹೇಳಿದ್ದರು’ ಎಂದು ಅವರು ತಿಳಿಸಿದರು.

‘ಇದೇ ಪಂದ್ಯದಲ್ಲಿ ದೋನಿ ಅವರಿಂದ ಜನಪ್ರಿಯವಾದ ಹೆಲಿಕಾಪ್ಟರ್‌ ಹೊಡೆತವನ್ನು ನಾನು ಪ್ರಯತ್ನಿಸಿ ಯಶಸ್ವಿಯಾದೆ. ಪರಿಸ್ಥಿತಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕ ರೀತಿ ಬ್ಯಾಟಿಂಗ್‌ ಮಾಡುವ ಸಂಬಂಧ ದೋನಿ ನನಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT