ಲೋಕಸಭೆ ಚುನಾವಣೆ ವೇಳಾಪಟ್ಟಿ ಇಂದು ಸಂಜೆ 5ಕ್ಕೆ ಘೋಷಣೆ?

ಗುರುವಾರ , ಮಾರ್ಚ್ 21, 2019
32 °C
ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಚುನಾವಣಾ ಆಯೋಗ

ಲೋಕಸಭೆ ಚುನಾವಣೆ ವೇಳಾಪಟ್ಟಿ ಇಂದು ಸಂಜೆ 5ಕ್ಕೆ ಘೋಷಣೆ?

Published:
Updated:

ನವದೆಹಲಿ: ‘ಹೈ ವೋಲ್ಟೇಜ್‌’ ಲೋಕಸಭಾ ಚುನಾವಣೆ ವೇಳಾಪಟ್ಟಿಯನ್ನು ಇಂದು(ಭಾನುವಾರ) ಘೋಷಿಸಲು ಚುನಾವಣಾ ಆಯೋಗ ಸಿದ್ಧವಾಗಿದೆ. ಇದು ಏಪ್ರಿಲ್‌–ಮೇನಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಚುನಾವಣಾ ಆಯೋಗ ಇಂದು ಸಂಜೆ 5ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ಪ್ರಸ್ತುತ ಲೋಕಸಭೆ ಅವಧಿಯು ಜೂನ್‌ 3ರಂದು ಕೊನೆಗೊಳ್ಳಲಿದೆ.

ಮೊದಲ ಹಂತದ ಅಧಿಸೂಚನೆಯು ಮಾರ್ಚ್‌ ಅಂತ್ಯದ ವೇಳೆಗೆ ಆಗಲಿದ್ದು, ಏಪ್ರಿಲ್‌ ಅಂತ್ಯದಲ್ಲಿ ಚುನಾವಣೆ ದಿನಾಂಕ ಗೊತ್ತುಪಡಿಸಬಹುದು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯ ಜತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಆಯೋಗ ನಿರ್ಧಾರ ಪ್ರಕಟಿಸಬಹುದು ಎನ್ನಲಾಗಿದೆ.

ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಆಗಿರುವುದರಿಂದ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಅಂದರೆ ಮೇ ತಿಂಗಳೊಳಗೆ. ಲೋಕಸಭೆ ಚುನಾವಣೆ ಜತೆ ಜಮ್ಮು-ಕಾಶ್ಮೀರ ಚುನಾವಣೆ ನಡೆಸಲು ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಇರುವುದು ಆಯೋಗದ ಕಾರ್ಯಕ್ಕೆ ಅಡ್ಡಿಯಾಗಲಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !