ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ?

7

ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ?

Published:
Updated:

ನವದೆಹಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿ ಅಂತಿಮಗೊಳಿಸುವ ಕೆಲಸವನ್ನು ಚುನಾವಣಾ ಆಯೋಗ ಆರಂಭಿಸಿದೆ. ಅದಕ್ಕಾಗಿ ಶಾಲಾ–ಕಾಲೇಜು ವಾರ್ಷಿಕ ಪರೀಕ್ಷೆಗಳು ಮತ್ತು ಹಬ್ಬಗಳ ದಿನಾಂಕಗಳನ್ನು ಸಂಗ್ರಹಿಸಲು ತೊಡಗಿದೆ. 

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮಾರ್ಚ್‌ ತಿಂಗಳಿನ ಮಧ್ಯದಲ್ಲಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆಯಲ್ಲಿ ಆಯೋಗ ತೊಡಗಿದೆ. ಹಲವು ಹಂತಗಳಲ್ಲಿ ಮತದಾನ ನಡೆಯಲಿದೆ. ಹಬ್ಬಗಳು ಮತ್ತು ಪರೀಕ್ಷೆಗಳಿಗೆ ತೊಡಕಾಗದಂತೆ ಮತದಾನ ದಿನಾಂಕ ನಿಗದಿ ಮಾಡುವ ಕೆಲಸ ಆರಂಭವಾಗಿದೆ. 

ಕಳೆದ ಬಾರಿಯ ಲೋಕಸಭೆ ಚುನಾವಣೆ 9 ಹಂತಗಳಲ್ಲಿ 2014ರ ಏಪ್ರಿಲ್‌ 7ರಿಂದ ಮೇ 12ರ ವರೆಗೆ ಮತ್ತು ಮತ ಎಣಿಕೆಯು ಮೇ 16ರಂದು ನಡೆದಿತ್ತು. 

ಏಪ್ರಿಲ್‌ ಎರಡನೇ ವಾರದಲ್ಲಿ ಮೊದಲ ಹಂತದ ಮತದಾನ

ಮೇ ಮೊದಲನೇ ಅಥವಾ 2ನೇ ವಾರದಲ್ಲಿ ಕೊನೆಯ ಹಂತದ ಮತದಾನ

ಮೇ ಮೂರು ಅಥವಾ ನಾಲ್ಕನೇ ವಾರದಲ್ಲಿ ಮತ ಎಣಿಕೆ

 

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !