ಬುಧವಾರ, ಸೆಪ್ಟೆಂಬರ್ 18, 2019
26 °C

ಆರ್ಥಿಕ ಹಿಂಜರಿತ: ಮೋದಿ ಮೌನ ಅಪಾಯಕಾರಿ –ಪ್ರಿಯಾಂಕಾ

Published:
Updated:

ನವದೆಹಲಿ: 'ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದ ವರದಿಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೌನವಹಿಸಿರುವುದು ಅಪಾಯಕಾರಿ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

'ನೆಪಗಳು ಮತ್ತು ವಾಕ್ಚಾತುರ್ಯದಿಂದ ಯಾವುದೇ ಉಪಯೋಗವಿಲ್ಲ’ ಎಂದು ಪ್ರಧಾನಿ ವಿರುದ್ಧ ಪ್ರಿಯಾಂಕಾ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

ಆರ್ಥಿಕ ಹಿಂಜರಿತ ತಡೆಗೆ ಪರಿಹಾರೋಪಾಯ ಕೈಗೊಳ್ಳಬೇಕು ಇಲ್ಲವೇ ಅರ್ಥವ್ಯವಸ್ಥೆಯನ್ನು ಸದೃಢಗೊಳಿಸುವ ಕುರಿತು ದೇಶದ ಜನತೆಗೆ ಭರವಸೆ ನೀಡಬೇಕು’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ... ಸೇವಾ ವಲಯದ ಪ್ರಗತಿಯೂ ಕುಂಠಿತ: ಸಾಧಾರಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ

 ಇದನ್ನೂ ಓದಿ... ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

Post Comments (+)