ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಅಧಿವೇಶನ: ಇಂದು ಆರ್ಥಿಕ ಸಮೀಕ್ಷೆ ಮಂಡನೆ, ರಾಷ್ಟ್ರಪತಿ ಭಾಷಣ, ನಾಳೆ ಬಜೆಟ್

Last Updated 31 ಜನವರಿ 2020, 3:37 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾಡುವ ಭಾಷಣದೊಂದಿಗೆ ಸಂಸತ್ತಿನಲ್ಲಿ ಶುಕ್ರವಾರದಿಂದ (ಜ.31) ಬಜೆಟ್ ಅಧಿವೇಶನ ಆರಂಭವಾಗಲಿದೆ.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯ ಸಂಸದೀಯ ನಾಯಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದಾರೆ.

ದೇಶದ ಜನರು ಕಾತರದಿಂದ ನಿರೀಕ್ಷಿಸುತ್ತಿರುವಕೇಂದ್ರ ಬಜೆಟ್ ನಾಳೆ (ಫೆ.1) ಮಂಡನೆಯಾಗಲಿದೆ. ಇದಕ್ಕೆ ಒಂದು ದಿನ ಮೊದಲು, ಜ.31ರಂದು ಹಣಕಾಸು ಇಲಾಖೆ ರಾಷ್ಟ್ರೀಯ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಲಿದೆ.

ಪ್ರಸ್ತುತ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿಕಳೆದ ಒಂದು ವರ್ಷದ ಆರ್ಥಿಕ ವಿದ್ಯಮಾನಗಳಕೈಗನ್ನಡಿ ಎನ್ನಲಾಗುವ ಆರ್ಥಿಕ ಸಮೀಕ್ಷೆಯಬಗ್ಗೆ ವ್ಯಾಪಕ ಕುತೂಹಲ ವ್ಯಕ್ತವಾಗಿದೆ.

ಹಣಕಾಸು ಇಲಾಖೆಯ ಈ ವಾರ್ಷಿಕ ದಾಖಲೆಯು ಸರ್ಕಾರದ ಮುಖ್ಯ ಅಭಿವೃದ್ಧಿ ಯೋಜನೆಗಳ ಪ್ರಗತಿ, ಆರ್ಥಿಕ ಸ್ಥಿತಿಗತಿ ಮತ್ತು ಸರ್ಕಾರದ ಮುಖ್ಯ ನೀತಿಗಳ ಅನುಷ್ಠಾನದ ಸ್ಥಿತಿಗತಿ ಮತ್ತು ಪರಿಣಾಮಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈ ಬಾರಿ ಬಜೆಟ್ ಅಧಿವೇಶನ ಎರಡು ಭಾಗಗಳಲ್ಲಿ ನಡೆಯಲಿದೆ.ಜ.31ಕ್ಕೆ ಆರಂಭವಾಗುವ ಅಧಿವೇಶನ ರಿಂದಫೆ.11ಕ್ಕೆ ಮುಕ್ತಾಯವಾಗಲಿದೆ.ಮಾರ್ಚ್ 2ರಿಂದ ಮತ್ತೆಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 3ಕ್ಕೆ ಮುಕ್ತಾಯವಾಗಲಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯು ಇಂದು ಮಧ್ಯಾಹ್ನ 2 ಗಂಟೆಗೆ, ಎನ್‌ಡಿಎ ಸಭೆಯು ಮಧ್ಯಾಹ್ನ 3.30ಕ್ಕೆ ನಡೆಯುವ ಸಾಧ್ಯತೆ ಇದೆ.

ಬಜೆಟ್ ಮಾಹಿತಿಗೆ:www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT