ಶನಿವಾರ, ನವೆಂಬರ್ 16, 2019
22 °C

ಅಕ್ರಮ ಹಣ ವರ್ಗಾವಣೆ: ಜೆಕೆಸಿಎ ಖಜಾಂಚಿ ಬಂಧನ

Published:
Updated:

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು–ಕಾಶ್ಮೀರ ಕ್ರಿಕೆಟ್‌ ಅಸೋಸಿಯೇಶನ್‌ (ಜೆಕೆಸಿಎ) ಮಾಜಿ ಖಜಾಂಚಿ ಅಹ್ಸಾನ್‌ ಅಹ್ಮದ್‌ ಮಿರ್ಜಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಬಂಧಿಸಿದೆ. 

ಮಿರ್ಜಾ ಅವರು ಜೆಕೆಸಿಎ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಆಪ್ತರು ಎನ್ನಲಾಗಿದೆ. 

ಮಿರ್ಜಾ ಅವರು ಖಜಾಂಚಿಯಾಗಿದ್ದಾಗ ಅಕ್ರಮ ಹಣಕಾಸಿನ ವ್ಯವಹಾರವನ್ನು ಗೋಪ್ಯವಾಗಿ ನಿರ್ವಹಿಸಿದ್ದು, ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇ.ಡಿ ಆರೋಪಿಸಿದೆ. 

ಜೆಕೆಸಿಎ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಬ್ಯಾಂಕ್‌ ಲೆಕ್ಕಪತ್ರಗಳ ತನಿಖೆ ವೇಳೆ ಖಚಿತಗೊಂಡಿದೆ. ಈ ಕುರಿತು ಮಿರ್ಜಾ ತೃಪ್ತಿಕರ ವಿವರಣೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಫಾರುಕ್‌ ಅಬ್ದುಲ್ಲಾ ಅವರನ್ನು ಮೊದಲ ಬಾರಿಗೆ ಚಂಡೀಗಢದಲ್ಲಿ ಇದೇ ವರ್ಷ ಜುಲೈನಲ್ಲಿ ವಿಚಾರಣೆ ನಡೆಸಲಾಗಿತ್ತು. 

ಜೆಕೆಸಿಎಗೆ ಮೀಸಲಾಗಿದ್ದ ₹43 ಕೋಟಿ ಹಣವನ್ನು ಅಕ್ರಮವಾಗಿ ಬಳಸಿಕೊಂಡ ಆರೋಪದ ಮೇರೆಗೆ ಫಾರೂಕ್‌ ಅಬ್ದುಲ್ಲಾ ಸೇರಿದಂತೆ ಮೂವರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲಾಗಿತ್ತು. 

ಪ್ರತಿಕ್ರಿಯಿಸಿ (+)