ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ವರ್ಗಾವಣೆ: ಸಂಸದ ವೈ.ಎಸ್.ಚೌಧರಿ ನಿವಾಸದ ಮೇಲೆ ಇ.ಡಿ, ಐ.ಟಿ ದಾಳಿ

Last Updated 24 ನವೆಂಬರ್ 2018, 6:24 IST
ಅಕ್ಷರ ಗಾತ್ರ

ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮತ್ತು ಹಣಕಾಸು ವ್ಯವಹಾರ ಅಕ್ರಮಗಳ ಸಂಬಂಧ ಕೇಂದ್ರ ಮಾಜಿ ಸಚಿವ ಹಾಗೂ ತೆಲುಗು ದೇಶಂ ಪಕ್ಷದ ಸಂಸದ ವೈ.ಎಸ್.ಚೌಧರಿ ಅವರ ನಿವಾಸ ಮತ್ತು ಕಚೇರಿಯಮೇಲೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವೈ.ಎಸ್.ಚೌಧರಿಯ ಆಪ್ತ ಹಾಗೂ ‘ಸುಜಾನಾ ಗ್ರೂಪ್ ಆಫ್ ಇಂಡಸ್ಟ್ರೀಸ್’ನ ಮಾಲೀಕ ಸುಜಾನಾ ಚೌಧರಿ ಅವರು ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಖಚಿತಪಡಿಸಿದ್ದಾರೆ.

‘ಸುಜಾನಾ ಗ್ರೂಪ್ ಆಫ್ ಇಂಡಸ್ಟ್ರೀಸ್’ ಮೇಲೆ ಶುಕ್ರವಾರ ತಡರಾತ್ರಿ ಹಠಾತ್ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಶನಿವಾರವೂ ಪರಿಶೀಲನೆಮುಂದುವರಿಸಿದ್ದಾರೆ.

‘ನಾಗಾರ್ಜುನ ಹಿಲ್ಸ್‌’ ಬಳಿ ಇರುವ ‘ಸುಜಾನಾ ಯೂನಿವರ್ಸೆಲ್ ಇಂಡಸ್ಟ್ರೀಸ್’ ಹಾಗೂ ‘ಸ್ಪೆಂಡ್ಲಿಡ್ ಮೆಟಲ್ ಪ್ರಾಡಕ್ಟ್‌ಲಿಮಿಟೆಡ್‌’ನಲ್ಲಿ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಅಕ್ರಮ ಹಣಕಾಸು ವ್ಯವಹಾರಕ್ಕೆಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜತೆಗೆ ‘ಜುಬ್ಲಿ ಹಿಲ್ಸ್’ ಬಳಿ ಇರುವ ಚೌಧರಿ ಅವರ ಮುಖ್ಯ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ.

ಚೌಧರಿ ಅವರುಮಾರ್ಚ್ ತಿಂಗಳವರೆಗೆ ನರೇಂದ್ರ ಮೋದಿ ಸಂಪುಟದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT