ಪ್ಯಾರಾಲಿಂಪಿಕ್ ಕ್ರೀಡಾಪಟು ದೀಪಾ ಮಲಿಕ್ ಬಿಜೆಪಿಗೆ ಸೇರ್ಪಡೆ

ಸೋಮವಾರ, ಏಪ್ರಿಲ್ 22, 2019
29 °C

ಪ್ಯಾರಾಲಿಂಪಿಕ್ ಕ್ರೀಡಾಪಟು ದೀಪಾ ಮಲಿಕ್ ಬಿಜೆಪಿಗೆ ಸೇರ್ಪಡೆ

Published:
Updated:

ನವದೆಹಲಿ: ಪ್ಯಾರಾಲಿಂಪಿಕ್ಸ್  ಸ್ಪರ್ಧೆಯಲ್ಲಿ ಮೊದಲ ಬಾರಿ ಪದಕ ಗಳಿಸಿದ್ದ  ಮಹಿಳಾ ಕ್ರೀಡಾಪಟು ದೀಪಾ ಮಲಿಕ್ ಸೋಮವಾರ ಬಿಜೆಪಿ ಸೇರಿದ್ದಾರೆ.

ಹರಿಯಾಣ ಬಿಜೆಪಿ ಘಟಕ ಮುಖ್ಯಸ್ಥ ಸುಭಾಶ್ ಬರಾಲಾ ಮತ್ತು ಪಕ್ಷದ ಹಿರಿಯ ನೇತಾರರ ಸಮ್ಮುಖದಲ್ಲಿ ದೀಪಾ ಬಿಜೆಪಿಗೆ ಸೇರಿದರು.

ಮಹಿಳೆಯರ ಅಭಿವೃದ್ಧಿಗಾಗಿ ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಮಹಿಳೆ ಪರ ಅವರ ಕಾಳಜಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅವರು ಪಕ್ಷದ ನಾಯಕಿಯರಿಗೆ ಸಚಿವ ಸಂಪುಟದಲ್ಲಿ ಉತ್ತಮ ಹುದ್ದೆಗಳನ್ನು ಕೊಟ್ಟಿದ್ದಾರೆ. ಅಂಗವಿಕಲರ ಶ್ರೇಯಾಭಿವೃದ್ಧಿಗಾಗಿ ಮೋದಿ ಕೆಲಸ ಮಾಡಿದ್ದಾರೆ ಎಂದು ದೀಪಾ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೀಪಾ ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅವರ ಸಾನಿಧ್ಯವು ನಮ್ಮ ಸಂಘಟನೆಗೆ ಬಲ ತುಂಬಲಿದೆ. ಅವರು ಎಲ್ಲರಿಗೂ ಸ್ಫೂರ್ತಿ. ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು ಅವರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !