ಮಂಗಳವಾರ, ಡಿಸೆಂಬರ್ 10, 2019
19 °C

ಮೂರು ಮೊಟ್ಟೆಯ ಕಥೆ: ₹1,672 ಬಿಲ್ ನೋಡಿ ದಂಗಾದ ಗಾಯಕ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ನಟ ರಾಹುಲ್ ಬೋಸ್ ಎರಡು ಬಾಳೆ ಹಣ್ಣಿಗೆ ₹ 442 ಬೆಲೆತೆತ್ತು ಸುದ್ದಿಯಾಗಿದ್ದ ಬೆನ್ನಲ್ಲೆ, ಇದೀಗ ಕೇವಲ ಮೂರು ಮೊಟ್ಟೆಗೆ ಬಂದ ಬಿಲ್ ನೋಡಿ ಸಂಗೀತ ನಿರ್ದೇಶಕ ಶೇಖರ್ ರಾವ್‌ ಜಿಯಾನಿ ದಂಗಾಗಿದ್ದಾರೆ.

ಮೂರು ಮೊಟ್ಟೆಗಳಿಗೆ ಫೈವ್ ಸ್ಟಾರ್ ಹೋಟೆಲ್ ವಿಧಿಸಿದ್ದ ಬಿಲ್ ಅನ್ನು ಲಗತ್ತಿಸಿ ಟ್ವೀಟ್ ಮಾಡಿರುವ ರಾಹುಲ್, ಮೂರು ಮೊಟ್ಟೆಯ ಬಿಳಿ ಭಾಗಗಳಿಗೆ ₹1,672 ಬಿಲ್? ಅದೊಂದು 'ದುಬಾರಿ ಮೊಟ್ಟೆಯ ಊಟ' ಎಂದು ಒಕ್ಕಣೆ ನೀಡಿದ್ದಾರೆ.

ಈ ವರ್ಷದ ಜುಲೈನಲ್ಲಿ ಶೂಟಿಂಗ್‍ಗಾಗಿ ಚಂಡೀಗಢದ ಐಶಾರಾಮಿ ಹೋಟೆಲ್‍ನಲ್ಲಿ ತಂಗಿದ್ದ ನಟ ರಾಹುಲ್ ಬೋಸ್, ಎರಡು ಬಾಳೆಹಣ್ಣನ್ನು ಆರ್ಡರ್ ಮಾಡಿದ್ದರು. ಹೋಟೆಲ್ ಸಿಬ್ಬಂದಿ ಬಾಳೆಹಣ್ಣಿನ ಜತೆಗೆ ಬಿಲ್ ಅನ್ನು ತಂದುಕೊಟ್ಟಿದ್ದಾರೆ. ಅದನ್ನು ನೋಡಿದ ರಾಹುಲ್ ಬೋಸ್ ಫುಲ್ ಶಾಕ್ ಆಗಿದ್ದರು. ನಂತರ ಎರಡು ಬಾಳೆಹಣ್ಣಿಗೆ ಕಳುಹಿಸಿದ್ದ ಬಿಲ್ ಹಾಗೂ ದುಬಾರಿ ಬೆಲೆಯ ಹಣ್ಣಿನ ಬಗ್ಗೆ ಒಂದು ವಿಡಿಯೊ ಮಾಡಿ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂತದ್ದೇ ಅನುಭವಗಳನ್ನು ಟ್ವೀಟಿಗರು ಬಿಚ್ಚಿಟ್ಟಿದ್ದರು. ಅದಾದ ಬಳಿಕ ದುಬಾರಿ ಬಿಲ್ ವಿಧಿಸಿದ ಹೋಟೆಲ್‌ಗೆ ಅಬಕಾರಿ ಮತ್ತು ತೆರಿಗೆ ಇಲಾಖೆ ₹ 25,000 ದಂಡ ವಿಧಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು