ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2019: ಫಲಿತಾಂಶ ತಡವಾಗಲಿದೆ ಯಾಕೆ ಗೊತ್ತಾ?

Last Updated 23 ಮೇ 2019, 2:41 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೆಲ್ಲ ದಿನಗಟ್ಟಲೆ ನಡೆಯುತ್ತಿದ್ದ ಮತ ಎಣಿಕೆ ಕಾರ್ಯ ಮತಯಂತ್ರಗಳ ಆಗಮನದೊಂದಿಗೆ ಅರ್ಧ ದಿನದಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮತ ಎಣಿಕೆ ಕಾರ್ಯ ಬೇಗನೆ ನಡೆದರೂ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಲಿದೆ.

ಕಾರಣ ವಿವಿ ಪ್ಯಾಟ್‌ ತಾಳೆ ಪ್ರಕ್ರಿಯೆ. ಸುಪ್ರೀಂಕೋರ್ಟ್‌ ಸೂಚನೆಯ ಮೇರೆಗೆ ಈ ಬಾರಿ ಪ್ರತಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಮತಗಟ್ಟೆಗಳ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಫಲಿತಾಂಶದ ಜತೆ ತಾಳೆ ಮಾಡಬೇಕಾಗಿದೆ. ಇದಕ್ಕೆ ಸಮಯ ಹಿಡಿಯುತ್ತದೆ.

ಹೀಗಾಗಿ ಫಲಿತಾಂಶ ಹೊರಬೀಳಲು ಸುಮಾರು 4 ಗಂಟೆಗಳಷ್ಟು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಹೆಚ್ಚಾದರೂ ಅಚ್ಚರಿ ಇಲ್ಲ. ಮೊದಲಿಗೆ ಇವಿಎಂ ಮತ ಎಣಿಕೆಯನ್ನು ಮಾಡುವ ಚುನಾವಣಾ ಆಯೋಗ, ಬಳಿಕ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 40 ಮತಗಟ್ಟೆಗಳ ವಿವಿಪ್ಯಾಟ್‌ ಮತ ಖಾತರಿ ಚೀಟಿಗಳ ಎಣಿಕೆ ಮತ್ತು ತಾಳೆ ಪ್ರಕ್ರಿಯೆ ನಡೆಸುತ್ತದೆ. ಇನ್ನೂ ಒಂದು ಸಮಸ್ಯೆ ಇದೆ. ಒಂದು ವೇಳೆ ಕಂಟ್ರೋಲ್‌ ಯುನಿಟ್‌ನಲ್ಲಿ ಮತಗಳು ಯಾವ ಪಕ್ಷಕ್ಕೆ ಹೋಗಿದೆ ಎಂಬುದು ಕಾಣಿಸದೇ ಇದ್ದರೆ, ಅದನ್ನು ಪ್ರತ್ಯೇಕವಾಗಿ ಇಟ್ಟು, ಕೊನೆಯಲ್ಲಿ ಮತ ಖಾತರಿ ಚೀಟಿಗಳನ್ನು ಎಣಿಕೆ ಮಾಡಲಾಗುವುದು.

ಮಾನವ ಲೋಪದಿಂದ ಸಮಸ್ಯೆ ಉಂಟಾದರೂ ಮತ ಖಾತರಿ ಚೀಟಿಯನ್ನು ಎಣಿಕೆ ಮಾಡಲಾಗುತ್ತದೆ. ಹೀಗೇನಾದರೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ಅದರಿಂದಲೂ ಫಲಿತಾಂಶ ವಿಳಂಬವಾಗಲಿದೆ. ಸಾಮಾನ್ಯವಾಗಿ ಒಂದು ಸುತ್ತಿನ ಮತ ಎಣಿಕೆಗೆ ಪೂರ್ಣಗೊಳ್ಳಬೇಕಿದ್ದರೆ 45 ನಿಮಿಷಗಳು ಬೇಕು. ಇನ್ನು ಮತಯಂತ್ರಗಳ ಮತ ಎಣಿಕೆಗೂ ಮೊದಲು ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಇದಕ್ಕೂ ಸರಿ ಸುಮಾರು ಒಂದು ಗಂಟೆ ಸಮಯ ಹಿಡಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT