ಮಂಗಳವಾರ, ಆಗಸ್ಟ್ 20, 2019
25 °C

ರಾಯಬರೇಲಿಯಲ್ಲಿ ಘರ್ಷಣೆ

Published:
Updated:

ಲಖನೌ: ರಾಯಬರೇಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಅದಿತಿ ಸಿಂಗ್‌ ಮೇಲೆ ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಹಿಂದೆ ಸೋನಿಯಾ ಗಾಂಧಿ ಅವರ ಆತ್ಮೀಯರೂ ಆಗಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌ ಅವರ ಬೆಂಬಲಿಗರು ಎನ್ನಲಾದ ಕೆಲವರು ಮಂಗಳವಾರ ದಾಳಿ ನಡೆಸಿದ್ದು, ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ದಿನೇಶ್‌ ಸಿಂಗ್‌ ಅವರ ಸಹೋದರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅವಧೇಶ್‌ ಸಿಂಗ್‌ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಮತಚಲಾಯಿಸಲು ಅದಿತಿ ಅವರು ರಾಯಬರೇಲಿಯತ್ತ ತೆರಳುತ್ತಿದ್ದಾಗ ಅವರ ವಾಹನದ ಮೇಲೆ ದಾಳಿ ನಡೆದಿತ್ತು.

ಈ ಸಂದರ್ಭದಲ್ಲಿ ವಾಹನ ಪಲ್ಟಿಯಾಗಿ ಅದಿತಿ ಅವರಿಗೆ ಗಾಯಗಳಾಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ರೆದೊಯ್ಯಲಾಯಿತು.ದಿನೇಶ್‌ ಅವರು ಸೋನಿಯಾ ವಿರುದ್ಧ ಸ್ಪರ್ಧೆಗಿಳಿದ ಕಾರಣಕ್ಕೆ ಜಿಲ್ಲಾಪಂಚಾಯಿತಿ ಸದಸ್ಯರು ಅವರ ಸಹೋ
ದರನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

Post Comments (+)